ಕಾವ್ಯ
ಜರಿವ ಜನರ ಕತ್ತಲ ಸಂತೆಃ ಗೋನಾಲ್ ಗಜಲ್
ಗಜಲ್
ಕಣ್ಣ ಮುಂದಿನ ಬೆಳಕು ಈ ಕನಸುಗಳು
ಬೆನ್ನ ಹಿಂದಿನ ಬದುಕು ಈ ನೆನಪುಗಳು
ಬದುಕು ಹರಿವು ಮರೆತ ತೊರೆಯು
ದಿಗಂತದಾಚೆಗೆ ಹೆಣೆಯಲಿ ನಮ್ಮ ಕನಸುಗಳು.
ಜನುಮವು ಜಗಮಗಿಸುವ ಜಾತ್ರೆ
ನಾನು ನೀನು ಮಾರಾಟಕ್ಕಿಟ್ಟ ಸರಕುಗಳು
ಜರಿವ ಜನಗಳ ಕತ್ತಲ ಸಂತೆಯಿದು
ನೆಲೆಯಿರದೆ ನರಳುತಿವೆ ನಮ್ಮ ನೆರಳುಗಳು
ಒಲವಮಧು ಎಷ್ಟು ಕುಡಿದರೇನು ‘ಮಹಾಂತ’
ಪ್ರೀತಿ ಹಂಚುವ ಜೀವಗಳು ಖೈದಿಗಳು
~ಮಹಾಂತೇಶ ಗೋನಾಲ.