ಪ್ರಮುಖ ಸುದ್ದಿ
ರಾಯಣ್ಣ ಬ್ರಿಗೇಡ್ ಮರೆತು ಹೋಯಿತೆಃ ಈಶ್ವರಪ್ಪಗೆ ಟಾಂಗ್ ಕೊಟ್ಟ ಯತ್ನಾಳ
ರಾಯಣ್ಣ ಬ್ರಿಗೇಡ್ ಮರೆತು ಹೋಯಿತೆಃ ಈಶ್ವರಪ್ಪಗೆ ಟಾಂಗ್ ಕೊಟ್ಟ ಯತ್ನಾಳ
ವಿವಿ ಡೆಸ್ಕ್ಃ ಸಿಎಂ ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಯತ್ನಾಳ ಅವರ ಹೇಳಿಕೆ ಕುರಿತು ಸಚಿವ ಈಶ್ವರಪ್ಪನವರು ಖಂಡಿಸಿ ಯತ್ನಾಳ ಉಚ್ಛಾಟಿಸುವಂತೆ ಹೇಳಿಕೆ ನಿಡಿದ್ದರು.
ಆ ಹೇಳಿಕೆಗೆ ಯತ್ನಾಳ ಫೇಸ್ ಬುಕ್ ನಲ್ಲಿ ಈಶ್ವರಪ್ಪನವರೇ ರಾಯಣ್ಣ ಬ್ರಿಗೇಡ್ ಮರೆತು ಹೋಯಿತೇ ಎಂದು ಬರೆಯುವ ಮೂಲಕ ಮೊದಲು ನಿಮ್ಮನ್ನು ಉಚ್ಛಾಟಿಸಬೇಕು ಎಂದಿದ್ದಾರೆ. ಬಿಜೆಪಿಯಲ್ಲಿ ಯತ್ನಾಳ ನೀಡಿದ್ದ ಸಿಎಂ ಬದಲಾವಣೆ ಹೇಳಿಕೆ ಮಾರ್ಧನಿಸುತ್ತಿದ್ದು ಬೂದಿಮುಚ್ವಿದ ಕೆಂಡದಂತಿದೆ.
ಮುಂದೆ ಯಾವ ಹಂತ ತಲುಪಲಿದೆ ಎಂಬುದು ಕಾದು ನೋಡಬೇಕು. ಈ ಮೊದಲೊಮ್ಮೆ ಯತ್ನಾಳ ಸಿಎಂ ವಿರುದ್ಧ ಹೇಳಿಕೆ ನೀಡಿ ದೊಡ್ಡ ಅವಾಂತರಕ್ಕೆ ಕಾರಣವಾಗಿ, ಕೊನೆಯಲ್ಲಿ ಯತ್ನಾಳ ಅವರನ್ನು ಕರೆಯಿಸಿ ಮಾತಾಡಿ ಶಾಂತ ವಾಗಿಸಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.