ಪ್ರಮುಖ ಸುದ್ದಿ
ದಿನಕ್ಕೆ ನೂರು ಕೋಟಿ ಲೂಟಿ, ವಿಪಕ್ಷಗಳಿಗೂ ಮಾಮೂಲು – ಯತ್ನಾಳ ಕಿಡಿ
ದಿನಕ್ಕೆ ನೂರು ಕೋಟಿ ಲೂಟಿ, ವಿಪಕ್ಷಗಳಿಗೂ ಮಾಮೂಲು – ಪಾಟೀಲ್ ಕಿಡಿ
ಮೈಸೂರಃ ರಾಜ್ಯ ಆಡಳಿತದಲ್ಲಿ ದುಷ್ಟರ ಕೂಟ ದಿನಕ್ಕೆ ನೂರು ಕೋಟಿ ಲೂಟಿ ಮಾಡುತ್ತಿದೆ. ಅಲ್ಲದೆ ವಿಪಕ್ಷಗಳಿಗೂ ತಿಂಗಳ ಮಾಮೂಲು ಹೋಗುತ್ತಿದೆ. ಆ ಕಾರಣಕ್ಕೆ ವಿಪಕ್ಷ ಸತ್ತು ಹೋದಂತಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ ನೀಡಿದರು.
ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಚಾಮುಂಡೇಶ್ವರಿ ತಾಯಿ ದುಷ್ಟರ ಸಂಹಾರ ಮಾಡಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ಮಾತು ಮುಂದುವರೆಸಿದ ಅವರು, ಪರೋಕ್ಷವಾಗಿ ರಾಜ್ಯ ಬಿಜೆಪಿ ಆಡಳಿತದ ವಿರುದ್ಧವೇ ಹರಿಹಾಯ್ದರು.