ಪ್ರಮುಖ ಸುದ್ದಿ
ಕಲಬುರಗಿ: ಶರಣಬಸವಪ್ಪ ಅಪ್ಪಾಗೆ ಪುತ್ರ ಸಂತಾನ ಭಾಗ್ಯ!
ಕಲಬುರಗಿ: ನಗರದ ಶ್ರೀ ಶರಣ ಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶರಣಬಸವಪ್ಪ ಅಪ್ಪಾ (82) – ದ್ರಾಕ್ಷಾಯಿಣಿ (40) ದಂಪತಿಗೆ ಗಂಡು ಮಗು ಜನಿಸಿದೆ. ದಂಪತಿಗೆ ಮೂರು ಜನ ಪುತ್ರಿಯರಿದ್ದರು. ಆದರೆ ಪುತ್ರ ಸಂತಾನವಿರಲಿಲ್ಲ ಎಂಬ ಕೊರಗಿತ್ತು ಎನ್ನಲಾಗಿದೆ. ನೂರಾರು ಕೋಟಿ ಆಸ್ತಿಪಾಸ್ತಿ ಹೊಂದಿರುವ ಶರಣ ಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಅವರಿಗೆ ಇಂದು ಗಂಡು ಮಗು ಜನಿಸಿದೆ.
ಮುಂಬೈ ನಗರದ ಖಾಸಗಿ ಆಸ್ಪತ್ರೆಯಲ್ಲಿ ದ್ರಾಕ್ಷಾಯಿಣಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಶರಣಬಸವಪ್ಪ ಅಪ್ಪ ಅವರ ವಾರಸುದಾರನ ಜನನ ಆಗಿದ್ದಕ್ಕೆ ಭಕ್ತರು ಸಂಭ್ರಮಿಸಿದ್ದಾರೆ. ಶರಣಬಸವೇಶ್ವರ ದೇಗುಲದ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ ಎಂದು ತಿಳಿದು ಬಂದಿದೆ.
Super fantastic