ಪ್ರಮುಖ ಸುದ್ದಿ

ಯೋಗದಿಂದ ದೇಹ ಸದೃಢ, ಧ್ಯಾನದಿಂದ ಆತ್ಮ ಶುದ್ಧಿ-ತಳವಾರ

ಯೋಗದಿಂದ ದೇಹ ಸದೃಢ, ಧ್ಯಾನದಿಂದ ಆತ್ಮ ಶುದ್ಧಿ-ತಳವಾರ

ಶಹಾಪುರಃ ನಿತ್ಯ ಯೋಗ ಅಭ್ಯಾಸ ರೂಢಿಸಿಕೊಂಡಲ್ಲಿ ಮನುಷ್ಯನ ದೇಃ ಸದೃಢವಾಗಿ ಸಶಕ್ತವಾಗಿ ಇರಲು ಸಾಧ್ಯವಿದೆ. ಅದರಂತೆ ಯೋಗದ ನಂತರ ಒಂದಿಷ್ಟು ಧ್ಯಾನ ಮಾಡಿದಲ್ಲಿ ಆತ್ಮ ಶುದ್ಧಿಯಾಗಿರುತ್ತದೆ. ಅದರಿಂದ ನೆಮ್ಮದಿ ಶಾಂತತೆ ಕಾಣಬಹುದು ಎಂದು ಯೋಗ ಪಟು ಬಸವರಾಜ ತಳವಾರ ತಿಳಿಸಿದರು.

ನಗರದ ವಾಕಿಂಗ್ ಗೆಳೆಯರ ಬಳಗ 7 ನೇವರ್ಷದ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಇಲ್ಲಿನ ದಿಗ್ಗಿ ಸಂಗಮೇಶ್ವರ ಸುಕ್ಷೇತ್ರಕ್ಕೆ ತೆರಳುವ ಮಾರ್ಗದಲ್ಲಿ ಸರಳವಾಗಿ ನಡೆದ ಯೋಗ ಅಭ್ಯಾಸದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಯೋಗ ಪುರಾತನಕಾಲದಿಂದ ಬಂದಿದ್ದು, ಇದು ನಮ್ಮ ದೇಶದ ಸಂಸ್ಕøತಿ ಪ್ರತಿಕವಾಗಿದೆ.

ಯೋಗದಿಂದ ರೋಗ ಮುಕ್ತಿ ಎಂಬಂತೆ ನಿತ್ಯ ಯೋಗ ಅಭ್ಯಾಸ ಮೈಗೂಡಿಸಿಕೊಂಡಲ್ಲಿ ಮನುಷ್ಯನ ಹತ್ತಿರ ಯಾವ ರೋಗವು ಸುಳಿಯುವದಿಲ್ಲ. ಪ್ರಸ್ತುತ ಬದುಕಿನ ಜಂಜಾಟದಲ್ಲಿ ಒತ್ತಡ ಹೆಚ್ಚಾಗುತ್ತಿದ್ದು, ಶುಗರ್, ಬಿಪಿ ಎಂತಹ ಕಾಯಿಲೆ ಸಾಮಾನ್ಯವಾಗಿದೆ.

ಹೀಗಾಗಿ ಇಂತಹ ಸ್ಥಿತಿಯಲ್ಲಿ ಮನುಷ್ಯನಿಗೆ ನಿತ್ಯ ಯೋಗ ಜೊತೆಗೆ ಧ್ಯಾನದ ಅವಶ್ಯಕತೆ ಇದೆ. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಮಾನಸಿಕ ಸಮತೋಲನತೆ ಉಂಟಾಗಿ ಸಮಧನಾ ತೃಪ್ತಿ ಕಾಣಲು ಸಾಧ್ಯವಿದೆ ಎಂದರು.
ಈ ಸಂದರ್ಭದಲ್ಲಿ ರಾಜಕುಮಾರ ಚಿಲ್ಲಾಳ, ಶರಣಗೌಡ ಕಟ್ಟಿಮನಿ, ಸಿದ್ದನಗೌಡ ತಂಗಡಿಗಿ, ಮಲ್ಲಿಕಾರ್ಜುನ ಬುಕಿಸ್ಟಗಾರ, ಉಮೇಶ ಬಾಗೇವಾಡಿ, ಬಸವರಾಜ ಚೌದ್ರಿ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button