ಪ್ರಮುಖ ಸುದ್ದಿ
BREKING NEWS: ಓವೈಸಿ ಎರಡನೇ ಜಿನ್ನಾ ಆಗಲು ಹೊರಟಂತಿದೆ – ಬಾಬಾ ರಾಮದೇವ
ಉಡುಪಿಃ ರಾಮ ಮಂದಿರ ವ್ಯಾಟಿಕನ್ ಮತ್ತು ಮೆಕ್ಕಾದಂತೆ ಹಿಂದೂಗಳ ತೀರ್ಥಕ್ಷೇತ್ರವಾಗಿ ಬೆಳೆಯಬೇಕು. ಮತ್ತು ರಾಮ ಮಂದಿರ ನಿರ್ಮಾಣ ಪೇಜಾವರ ಶ್ರೀಗಳಂತಹ ಹಿರಿಯರ ಕನಸಾಗಿತ್ತು. ಹೀಗಾಗಿ ಟ್ರಸ್ಟ್ ರಚಿಸುವಾಗ ಇಂತಹ ಹಿರಿಯರು ಒಳಗೊಳ್ಳುವಿಕೆ ಅಗತ್ಯವಿದೆ ಎಂದು ಯೋಗ ಗುರು ಬಾಬಾ ರಾಮದೇವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮುಂದುವರೆದು ಮಾತನಾಡಿದ ಅವರು, ಓವೈಸಿ ಎರಡನೇ ಜಿನ್ನಾ ಆಗಲು ಹೊರಟಿದ್ದಾರೆ, ಅದು ಸಾಧ್ಯವಿಲ್ಲ ಎಂದಿದ್ದಾರೆ. ನಡೆದು ಹೋದ ಘಟನೆಗಳ ಬಗ್ಗೆ ಚಿಂತಿಸಿ ಫಲವಿಲ. ಸೌಹಾರ್ದ, ಸಮಾನತೆಗೆ ಆದ್ಯತೆ ಇದೆ.
ಅಯೋಧ್ಯೆ ಯಲ್ಲಿ ಕೇವಲ ರಾಮ ಮಂದಿರ ಅಲ್ಲ ಜೊತೆಗೆ ಪೂಜಾ ಪುನಸ್ಕಾರ ವಿಧಿಬದ್ಧವಾಗಿ ನಡೆಯಲು ವೈದಿಕ ಮಂತ್ರೋಪಚಾರಣೆ ನೆರವೇರಿಸುವ ಕಾರ್ಯಕೈಗೊಳ್ಳಬೇಕು ಎಂದರು.