ಪ್ರಮುಖ ಸುದ್ದಿಸಂಸ್ಕೃತಿ
ಶಹಾಪುರದಲ್ಲಿ ಜು.21 ರಿಂದ ಯೋಗೋತ್ಸವ
ಶಹಾಪುರಕ್ಕೆ ಆಧ್ಯಾತ್ಮಿಕ ಪ್ರವಚನಕಾರ, ಯೋಗಿ ನಿರಂಜನಶ್ರೀ
ಶಹಾಪುರದಲ್ಲಿ ಜು.21 ರಿಂದ ಯೋಗೋತ್ಸವ
ಶಹಾಪುರಕ್ಕೆ ಆಧ್ಯಾತ್ಮಿಕ ಪ್ರವಚನಕಾರ, ಯೋಗಿ ನಿರಂಜನಶ್ರೀ
yadgiri, ಶಹಾಪುರಃ ಶಹಾಪುರ ಪಟ್ಟಣಕ್ಕೆ ಇದೇ ಮೊದಲ ಬಾರಿಗೆ ಖ್ಯಾತ ಹಿಮಾಲಯನ್ ಧ್ಯಾನ ಯೋಗಿ ಮತ್ತು ಆಧ್ಯಾತ್ಮಿಕ ಪ್ರವಚನಕಾರ ಶ್ರೀ ನಿರಂಜನ ಶ್ರೀಗಳ ಪಾದಾರ್ಪಣೆಯಾಗಿದ್ದು, ಇದೇ ಜುಲೈ 21 ರಿಂದ 31 ರವರೆಗೆ ಯೋಗೋತ್ಸವ ಜರುಗಲಿದೆ.
ಜುಲೈ 21 ರಿಂದ ನಗರದ ಫಕಿರೇಶ್ವರ ಮಠದ ಬಯಲು ಬಸವ ಮಂಟಪ ಆವರಣದಲ್ಲಿ 10 ದಿನಗಳ ಕಾಲ ಯೋಗೋತ್ಸವ ನಡೆಯಲಿದೆ. ಬೆಳಗ್ಗೆ 5:30 ರಿಂದ 6:30 ಮತ್ತು ಸಂಜೆ 6:30 ರಿಂದ 7:30 ಸಮಯದಲ್ಲಿ ಯೋಗ ಶಿಬಿರ ಹಾಗೂ ಆಧ್ಯಾತ್ಮಿಕ ಪ್ರವಚನ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಜನಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಯೋಗ ಅಭ್ಯಾಸದ ಜೊತೆಗೆ ಆಧ್ಯಾತ್ಮಿಕ ಪ್ರವಚನ ಆಲಿಸುವ ಮೂಲಕ ಉತ್ತಮ ಬದುಕು ರೂಪಿಸಿಕೊಳ್ಳಬೇಕೆಂದು ಶಹಾಪುರ ಆಧ್ಯಾತ್ಮಿಕ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.