ನೀರು ಕಳ್ಳ ಎಂದು ಈಶ್ವರಪ್ಪ ಅಂದಿದ್ಯಾರಿಗೆ..?
ಈಶ್ವರಪ್ಪ ಹೇಳಿಕೆಗೆ ಡಿಕೆಶಿ ಗರಂ
ವಿವಿ ಡೆಸ್ಕ್ಃ ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪನವರು, ಮಾಧ್ಯಮದ ಮುಂದೆ ಹೇಳಿಕೆಯೊಂದನ್ನು ನೀಡಿದ್ದು, ರಾಜ್ಯ ಆಡಳಿತ ಕಾಂಗ್ರೆಸ್ ಸರ್ಕಾರದ ವಿರುದ್ಧ “ನೀರು ಕಳ್ಳ” ಎಂದು ದೂಷಿಸುವ ಮೂಲಕ ಡಿಕೆಶಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರಾಜ್ಯದಲ್ಲಿ ನೀರಿನ ಅಭಾವ ಇರುವ ಸಂದರ್ಭದಲ್ಲಿ ತಮಿಳುನಾಡಿಗೆ ರಾತ್ರೋರಾತ್ರಿ ಕಾವೇರಿ ನೀರು ಹರಿಸಿರುವದನ್ನು ಖಂಡಿಸಿದ ಅವರು ಕಾಂಗ್ರೆಸ್ನ ಅವಿವೇಕಿತನ ಪ್ರದರ್ಶನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಕಳ್ಳದಾರಿ ಮೂಲಕ ನೀರು ಹತಿಸಿರುವದರಿಂದ ನೀರು ಕಳ್ಳ ಎಂದು ಸಂಬೋದಿಸಿದ್ದೇನೆ ಇದರಲ್ಲೇನು ತಪ್ಪಿದೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಈಶ್ವರಪ್ಪನವರ ನೀರು ಕಳ್ಳ ಹೇಳಿಕೆಗೆ ಗರಂ ಆದ ಉಪ ಮುಖ್ಯಮಂತ್ರಿ ಡಿಕೆಶಿ ಈಶ್ವರಪ್ಪನವರಿಗೆ ಬಿಜೆಪಿ ಚುನಾವಣೆ ವೇಳೆ ಟಿಕೆಟ್ ನೀಡದೆ ಇರುವದು ಅವರ ಯೋಗ್ಯತೆ ಏನು ಎಂಬುದು ತಿಳಿಯುತ್ತದೆ ಎಂದು ಟಾಂಗ್ ನೀಡಿದ್ದಾರೆ.