ಪಡಿತರ ಅಕ್ಕಿ ಕಳ್ಳತನ ಪ್ರಕರಣಃ ಮೂಲ ವ್ಯಕ್ತಿ ಬಂಧನಕ್ಕೆ ಆಗ್ರಹ
ಪಡಿತರ ಅಕ್ಕಿ ನಾಪತ್ತೆ ಃ ಮೂಲ ರೂವಾರಿ ಬಂಧನಕ್ಕೆ ಒತ್ತಾಯ
ಪಡಿತರ ಅಕ್ಕಿ ಕಳ್ಳತನ ಪ್ರಕರಣಃ ಮೂಲ ವ್ಯಕ್ತಿ ಬಂಧನಕ್ಕೆ ಆಗ್ರಹ
ಪಡಿತರ ಅಕ್ಕಿ ನಾಪತ್ತೆ ಃ ಮೂಲ ರೂವಾರಿ ಬಂಧನಕ್ಕೆ ಒತ್ತಾಯ
yadgiri, ಶಹಾಪುರಃ ಪಡಿತರ ಅಕ್ಕಿ ಸಂಗ್ರಹ ಗೋದಾಮಿನಲ್ಲಿರುವ ಅಂದಾಜು 2 ಕೋಟಿ ಮೌಲ್ಯದ 6,077 ಕ್ವಿಂಟಲ್ ಅಕ್ಕಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ರಚನಾ ತಂಡ ಪ್ರಾಮಾಣಿಕವಾಗಿ ತನಿಖೆ ನಡೆಸುವ ಮೂಲಕ ಮೂಲ ಕಳ್ಳರ ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿ ಇಲ್ಲಿನ ನಮ್ಮ ಕರ್ನಾಟಕ ಸೇನೆ ತಹಶೀಲ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಜಿಲ್ಲಾಧಿಕಾರಿಗಳು ಪಡಿತರ ಅಕ್ಕಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಿ ತಂಡ ರಚನೆ ಮಾಡಿರುವದು ಸ್ವಾಗತಾರ್ಹವಾಗಿದೆ. ಆದರೆ ತನಿಖಾ ತಂಡ ಯಾವುದೇ ಪಕ್ಷಪಾತ ಮಾಡದೆ ಅಕ್ಕಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ರಾಜಕೀಯ ಆಶ್ರಯದಲ್ಲಿರುವ ವ್ಯಕ್ತಿಯೋರ್ವನ ಹೆಸರು ನಗರದಲ್ಲಿ ಎಲ್ಲಡೆ ಕೇಳಿ ಬರುತ್ತಿದ್ದು, ಈ ಕೂಡಲೇ ಕುಲಕುಂಶವಾಗಿ ಪರಮಾರ್ಶಿಸಿ ಪಡಿತರ ಅಕ್ಕಿಯನ್ನು ಕ್ವಿಂಟಲ್‍ಗಟ್ಟಲೆ ಬೇರಡೆ ಸಾಗಾಣಿಕೆ ಮಾಡುವ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಈ ಕುರಿತು ಪ್ರಾಮಾಣಿಕ ತನಿಖೆ ನಡೆಸುವ ಮೂಲಕ ಪಡಿತರ ಅಕ್ಕಿ ಕಳ್ಳ ಸಾಗಾಣಿಕೆ ಮಾಡುವ ವ್ಯಕ್ತಿಗಳು ಸೇರಿದಂತೆ ಅವರಿಗೆ ಸಾಥ್ ನೀಡುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಮೂಲಕ ನಾಗರಿಕರಲ್ಲಿ ಭರವಸೆ ಮೂಡಿಸಬೇಕೆಂದು ಸೇನೆ ಆಗ್ರಹಿಸಿದೆ.
ಅಕ್ಕಿ ಕಳ್ಳತನದಲ್ಲಿ ತೊಡಗಿಸಿಕೊಂಡ ವ್ಯಕ್ತಿ ಯಾರೇ ಆಗಿರಲಿ ಎಷ್ಟೆ ಪ್ರಭಾವಿಯಾಗಿರಲಿ ರಾಜಕೀಯ ಒತ್ತಡಕ್ಕೆ ಮಣಿಯದೇ ಈ ಕೂಡಲೇ ಬಂಧಿಸುವ ಮೂಲಕ ನಾಗರಿಕರಿಗೆ ಅನ್ಯಾಯಕ್ಕೊಳಗಾದ ಬಡವರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸೇನೆಯ ರಾಜ್ಯ ಪ್ರಧಾನ ಸಂಚಾಲಕ ಭೀಮು ಶಖಾಪುರ, ನಕಸೇನಾ ತಾಲೂಕು ಅಧ್ಯಕ್ಷ ಸಿದ್ದು ಪಟ್ಟೇದಾರ, ಅಂಬರೀಷ ತೆಲ್ಲೂರ, ಸಾಯಬಣ್ಣ ಟೊಕಾಪುರ, ಸಂಜು ಪೂಜಾರಿ, ಬಾಬು ಸಾಹೇಬಜಾನಿ, ಶಶಿಪಾಲರಡ್ಡಿ ಪಾಟೀಲ್, ನಿಂಗಪ್ಪ ಮೋಗಿನ್, ವಿಶ್ವನಾಥರಡ್ಡಿ ದೇಸಾಯಿ, ಭೀಮು ಕವಲ್ದಾರ, ಭೀಮರಾಯ ಸಾವೂರ, ಬಾಬು ಗಂವಾರ, ಮಾಳಪ್ಪ ಮೇಟಿ, ಮಹಾಂತೇಶ ಗುತ್ತೇದಾರ, ಚಂದ್ರು ಹಲಗಿ, ಶಾಂತಯ್ಯ ಗುತ್ತೇದಾರ, ವಿಶ್ವರಾಧ್ಯ ನಾಯ್ಕೋಡಿ ಸೇರಿದಂತೆ ಇತರರು ಭಾಗವಹಿಸಿದ್ದರು.