Homeಪ್ರಮುಖ ಸುದ್ದಿ
ಪಿಎಂ ಕಿಸಾನ್ 17 ನೇ ಕಂತಿನ ಹಣ ಯಾವಾಗ ಬರುತ್ತದೆ..?
ಪಿಎಂ ಕಿಸಾನ್ 16ನೇ ಕಂತಿನ ಹಣವನ್ನು ಈಗಾಗಲೇ ರೈತರ ಖಾತೆಗೆ ಜಮಾ ಮಾಡಲಾಗಿದೆ. ಸದ್ಯ ದೇಶದ ರೈತರು 17ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ.
17ನೇ ಕಂತಿನ ಹಣ ಶೀಘ್ರವೇ ಖಾತೆಗೆ ಬರುವ ನಿರೀಕ್ಷೆ ಇದೆ. ಆ ಹಣವನ್ನು ಪಡೆಯಲು ಮೊದಲು ನೀವು eKYC
ಮಾಡಬೇಕಾಗಿದೆ. ಕೆಲ ರಾಜ್ಯಗಳಲ್ಲಿ ಲ್ಯಾಂಡ್ ಸೀಡಿಂಗ್ ಪ್ರಕ್ರಿಯೆ ನಡೆಯುತ್ತಿದ್ದು, ಹೀಗಾಗಿ 17ನೇ ಕಂತಿನ ಹಣವು ಲೋಕಸಭಾ ಚುನಾವಣೆಯ ಫಲಿತಾಂಶದ ಮೊದಲ ವಾರದಲ್ಲೆ ಬರುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಕುರಿತು ಕೃಷಿ ಸಚಿವಾಲಯದಿಂದ ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಹೊರ ಬಿದ್ದಿಲ್ಲ.