ಪ್ರಮುಖ ಸುದ್ದಿ

ಸ್ವಾತಂತ್ರ್ಯ ಅಮೃತ ಮಹೋತ್ಸವಃ ಬಾಲಕರಿಂದ ಸೈಕಲ್ ಯಾತ್ರೆಯ ನಮನ

ಸೈಕಲ್ ಯಾತ್ರೆಃ ಅವಳಿ ಸಹೋದರರ ದೇಶಪ್ರೇಮ

ಔರಾದ ಅಮರೇಶ್ವರ ಮಂದಿರದಿಂದ ಮಲೆ ಮಹಾದೇಶ್ವರ ಬೆಟ್ಟದವರೆಗೆ

ಸ್ವಾತಂತ್ರ್ಯ ಹೋರಾಟಗಾರರಿಗೆ ಬಾಲಕರ ಯಾತ್ರೆ ಪ್ರಶಂಸನೀಯ- ಗದ್ದುಗೆ

yadgiri, ಶಹಾಪುರಃ ಭಾರತದ ಸ್ವಾತಂತ್ರ್ಯೋತ್ಸವದ 75 ನೇ ವರ್ಷದ ಅಮೃತ ಮಹೋತ್ಸವದ ಪ್ರಯುಕ್ತ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಸ್ವಾತಂತ್ರ್ಯ ಸೇನಾನಿಗಳಿಗೆ ನಮನ ಸಲ್ಲಿಸುವ ಪ್ರಯುಕ್ತ ಬೀದರ ಜಿಲ್ಲೆಯ ಔರಾದ್ ತಾಲೂಕಿನ ಕೊಳ್ಳೂರ ಗ್ರಾಮದ ಅವಳಿ ಸಹೋದರರಾದ ಕುಮಾರ ಅರುಣ್ ರಾಕಲೇ ಮತ್ತು ಕರುಣ ರಾಕಲೇ ಔರಾದನ ಅಮರೇಶ್ವರ ದೇವಾಸ್ಥಾನದಿಂದ ಚಾಮರಾಜ ನಗರದ ಮಲೆ ಮಹಾದೇಶ್ವರ ಬೆಟ್ಟದವರೆಗೆ ಸುಮಾರು 1250 ಕೀಲೋ ಮೀಟರ್ ಸೈಕಲ್ ಯಾತ್ರೆಕೈಗೊಂಡಿದ್ದು, ಗುರುವಾರ ಸಂಜೆ ನಗರಕ್ಕೆ ಆಗಮಿಸಿದ ಬಾಲಕರಿಬ್ಬರನ್ನು ನಗರದಟ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಶಿಕ್ಷಕ ವೃಂದ ಮತ್ತು ಯುವಕರು ಅದ್ದೂರಿಯಾಗಿ ಬರಮಾಡಿಕೊಂಡರು. ಸಿಬಿ ಕಮಾನದಿಂದ ಅವರನ್ನು ಮೆರವಣಿಗೆ ಮೂಲಕ ಚರಬಸವೇಶ್ವರ ಗದ್ದುಗೆವರೆಗೂ ಕರೆ ತಂದರು. ಗದ್ದುಗೆಯಲ್ಲಿ ಅವಳಿ ಸಹೋದರರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಉಕ ಅಧ್ಯಕ್ಷ ಶರಣು ಗದ್ದುಗೆ, ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಸ್ವಾತಂತ್ರ್ಯ ವೀರರ ಸ್ಮರಣಾರ್ಥವಾಗಿ ಅಮೃತ ಮಹೋತ್ಸವ ಗಳಿಗೆಯಲ್ಲಿ ಸಣ್ಣ ವಯಸ್ಸಿನಲ್ಲಿಯೇ ಸೈಕಲ್ ಯಾತ್ರೆ ಮೂಲಕ ನಮನಗಳನ್ನು ಸಲ್ಲಿಸುತ್ತಿರುವ ಬಾಲಕರ ಸಂಕಲ್ಪ ದೇಶಪ್ರೇಮ ಎಲ್ಲರಿಗೂ ಮಾದರಿಯಾದದು. ಇನ್ನೂ 9 ನೇ ತರಗತಿಯಲ್ಲಿ ಅಭ್ಯಸಿಸುತ್ತಿರುವ ಪುಟ್ಟ ಬಾಲಕರಿಬ್ಬರ ಯಾತ್ರಾ ನಮನಗಳು ಮೆಚ್ಚವಂತಹದ್ದು, ಅವರ ಈ ಯಾತ್ರೆ ಪ್ರೇರಣಾದಾಯಕವಾಗಿದೆ ಎಂದರು.

ಮಾಧ್ಯಮಿಕ ಶಿಕ್ಷಕ ಸಂಘದ ಜಿಲ್ಲಾ ಅಧ್ಯಕ್ಷ ಅನೀಲ್ ಬಿರಾದಾರ ಮಾತನಾಡಿ, ಅತಿ ಚಿಕ್ಕ ವಯಸ್ಸಿನಲ್ಲಿ ಇಂತಹ ದೇಶ ಭಕ್ತಿ ಮೆರೆಯುತ್ತಿರುವ ಬಾಲಕರ ಸಂಕಲ್ಪ ಮಹತ್ವದ್ದು, ಅವರ ಕುಟುಂಬವು ದೇಶಪ್ರೇಮದ ಕುಟುಂಬವಿದೆ ಎಂದು ಬಾಳಕರಿಬ್ಬರ ಪರಿಚಯ ಮತ್ತು ಯಾತ್ರೆ ಉದ್ದೇಶ ಕುರಿತು ವಿವರಿಸಿದರು.

ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಸುಧಾಕರ ಗುಡಿ, ಆರ್‍ಎಸ್‍ಎಸ್‍ನ ಪ್ರಮುಖ ಸುಧೀರ ಚಿಂಚೋಳಿ, ಶಿಕ್ಷಕ ಲಕ್ಷ್ಮಣ ಲಾಳಸಗೇರಿ, ಶ್ರೀರಾಮಭಟ್ ಜೋಶಿ ಸೇರಿದಂತೆ ಮುಖಂಡರಾದ ಅಡಿವೆಪ್ಪ ಜಾಕಾ, ಗುರು ಮದ್ದೀನ್, ಶಂಭುಲಿಂಗ ಗೋಗಿ, ಸುರೇಶ ಅರುಣಿ, ಸತೀಶ ವಿಭೂತೆ, ಬಸವರಾಜ ಗೋಗಿ, ಎಬಿವಿಪಿಯ ಅರವಿಂದ ಉಪ್ಪಿನ್, ಬಸವರಾಜ ಹೆಮ್ಮಡಗಿ, ಸಿದ್ದು ಆನೇಗುಂದಿ ಇತರರಿದ್ದರು.

 

Related Articles

Leave a Reply

Your email address will not be published. Required fields are marked *

Back to top button