ಪ್ರಮುಖ ಸುದ್ದಿ
BREAKING – video viral ಆಂದ್ರಪ್ರದೇಶಃ ಸಮುದ್ರದಲ್ಲಿ ತೇಲಿ ಬಂದ ಬಂಗಾರ ಬಣ್ಣದ ರಥ
ಅಸನಿ ಚಂಡಮಾರುತ ಎಫೆಕ್ಟ್ಃ ಸಮುದ್ರದಲ್ಲಿ ತೇಲಿ ಬಂದ ರಥ
ಅಸನಿ ಚಂಡಮಾರುತ ಎಫೆಕ್ಟ್ಃ ಆಂದ್ರದ ಸಮುದ್ರ ದಡಕ್ಕೆ ತೇಲಿ ಬಂದಿತೆ ಚಿನ್ನದ ರಥ.? ವಿಡಿಯೋ ವೈರಲ್
ಆಂದ್ರದ ಸಮುದ್ರ ದಡಕ್ಕೆ ತೇಲಿ ಬಂದ ಬಂಗಾರ ಬಣ್ಣದ ರಥ
ಆಂದ್ರಪ್ರದೇಶಃ ಅಸನಿ ಚಂಡಮಾರುತ ತೀವ್ರತೆಗೆ ಆಂದ್ರಪ್ರದೇಶದ ಶ್ರೀಕಾಕುಳಂ, ಕಾಕಿನಾಡ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಭಾರಿ ಮಳೆಯೊಂದಿಗೆ ಗಾಳಿಯು ಬೀಸಿದೆ.
ಈ ಮಧ್ಯ ಶ್ರೀಕಾಕುಳಂನ ಸುನ್ನಪಲ್ಲಿ ಬಂದರಿನ ದಡಕ್ಕೆ ಬಂಗಾರ ಬಣ್ಣದ ರಥವೊಂದು ತೇಲಿ ಬಂದಿದೆ.
ಬಂಗಾರ ಬಣ್ಣದ ರಥ ಸಮುದ್ರದಲ್ಲಿ ತೇಲಿ ದಡಕ್ಕೆ ಬಂದಿರುವದು ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಫುಲ್ ವೈರಲ್ ಆಗಿದೆ.
ಮೀನುಗಾರರು ಮತ್ತು ಸ್ಥಳೀಯರು ಕುತುಹಲದಿಂದ ಅದನ್ನು ಪೂರ್ಣ ದಡಕ್ಕೆ ತಂದು ವೀಕ್ಷಿಸುತ್ತಿರುವದು ದೃಶ್ಯ ಎಲ್ಲಡೆ ಶೇರ್ ಆಗಿದೆ.ಅಲ್ಲದೆ ಟ್ವಿಟರ್ ನಲ್ಲಿ ಇದು ವೈರಲ್ ಆಗಿದೆ. ಈ ರಥ ಬೇರೆ ದೇಶದಿಂದ ಬಂದಿರಬಹುದು ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಗುಪ್ತಚರ ಇಲಾಖೆಗೂ ಮಾಹಿತಿ ನೀಡಲಾಗಿದೆ ಎಂದು ಎಸ್ ಐ ನೌಕಾ ದಳ ತಿಳಿಸಿದೆ.