ವಕೀಲರ ಜವಬ್ದಾರಿ ಹೆಚ್ಚಿದೆ – ನ್ಯಾ.ಕಾಡಪ್ಪ ಹುಕ್ಕೇರಿ

ಶಹಾಪುರದಲ್ಲಿ ವಕೀಲರ ದಿನಾಚರಣೆ
yadgiri, ಶಹಾಪುರ: ಸಾರ್ವಜನಿಕ ಸಮಸ್ಯೆ ಹಾಗೂ ಸವಾಲುಗಳಿಗೆ ಸದಾ ವಕೀಲರು ಜವಾಬ್ ಕೊಡುವಂತೆ ಆಗಿದೆ. ಸಮಾಜದಲ್ಲಿ ವಕೀಲರ ಜವಾಬ್ದಾರಿ ಹೆಚ್ಚಿದೆ. ಅದರಂತೆ ವಕೀಲ ವೃತ್ತಿಯು ಈಗ ಹೆಚ್ಚು ಜಟಿಲವಾಗುತ್ತಲಿದೆ. ಅಪರಾಧ ಪ್ರಕರಣಗಳು ನೂತನ ಬಗೆಯಲ್ಲಿ ನಡೆಯುತ್ತಿರುವುದರಿಂದ ಅದನ್ನು ಎದುರಿಸಲು ವಕೀಲರು ಸಿದ್ದರಾಗಬೇಕಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಕಾಡಪ್ಪ ಹುಕ್ಕೇರಿ ತಿಳಿಸಿದರು.
ನಗರದಲ್ಲಿ ವಕೀಲರ ಸಂಘವು ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯುವ ವಕೀಲರು ಸದಾ ಅಧ್ಯಯನ ಶೀಲರಾಗಬೇಕು. ನ್ಯಾಯಾಲಯದ ಕಲಾಪದಲ್ಲಿ ಹಿರಿಯ ವಕೀಲರು ವಾದ ಮಂಡಿಸುತ್ತಿರುವಾಗ ಅದನ್ನು ಗಮನವಿಟ್ಟು ಕೇಳಬೇಕು. ನಿರಂತರವಾಗಿ ಪರಿಶ್ರಮ ಮಾಡುತ್ತಾ ಕೆಲಸ ಮಾಡಬೇಕು. ಕಕ್ಷಿದಾರರ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಶಾಂತಗೌಡ ವಿ. ಪಾಟೀಲ್ ಮಾತನಾಡಿ, ವಕೀಲರು ಈಗ ಹೆಚ್ಚು ಒತ್ತಡದಲ್ಲಿ ಕೆಲಸ ಮಾಡುವಂತಾಗಿದೆ. ನಿರ್ಭೀತಿಯಿಂದ ವಕೀಲರು ಕೆಲಸ ಮಾಡಬೇಕಾದಲ್ಲಿ ವಕೀಲರ ಕಾಯ್ದೆ ಜಾರಿಗೆ ತರುವುದು ಅಗತ್ಯವಾಗಿದೆ. ಸಮಾಜದಲ್ಲಿ ನಡೆಯುತ್ತಿರುವ ನೂತನ ಅಪರಾಧ ಪ್ರಕರಣಗಳು ಅಂದರೆ ಸೈಬರ್ ಕ್ರೈಂ, ಅತ್ಯಾಚಾರ ಪ್ರಕರಣಗಳು ವಕೀಲರಿಗೆ ಸವಾಲು ಆಗಿ ಪರಿಣಿಮಿಸಿವೆ. ಆಳವಾದ ಅಧ್ಯಯನದ ಜೊತೆಗೆ ಹೊಸ ತಾಂತ್ರಿಕತೆ ವಿಧಾನವನ್ನು ವಕೀಲರು ಅರಿತುಕೊಳ್ಳುವುದು ಅವಶ್ಯವಿದೆ ಎಂದರು.
ಸರ್ಕಾರಿ ಅಭಿಯೋಜಕ ವಿನಾಯಕ ಕೋಡ್ಲಾ, ಹಿರಿಯ ವಕೀಲರಾದ ಶ್ರೀನಿವಾಸರಾವ್ ಕುಲಕರ್ಣಿ, ಎಸ್.ಶೇಖರ, ಎಂ.ಆರ್.ಮಾಲಿ ಪಾಟೀಲ್, ಭೀಮನಗೌಡ, ನಾಜಿಯಾ ಬೇಗಂ, ಆರ್.ಎಂ.ಹೊನ್ನಾರಡ್ಡಿ, ವಿಶ್ವನಾಥರಡ್ಡಿ ಸಾಹು, ಯೂಸೂಫ್ ಸಿದ್ದಕ್ಕಿ, ಟಿ.ನಾಗೇಂದ್ರ, ವಿಶ್ವನಾಥರಡ್ಡಿ ಪಾಟೀಲ್, ಎಂ.ಎನ್ ಪೂಜಾರಿ, ಹೇಮರಡ್ಡಿ ಕೊಂಗಂಡಿ, ಸಂತೋಷ ಸತ್ಯಂಪೇಟೆ ಇತರರಿದ್ದರು.