ಸುರಪುರದಲ್ಲಿ 2ನೇ ಜಿಲ್ಲಾ ಹೆಚ್ಚುವರಿ ಸೇಷನ್ಸ್ ಕೋರ್ಟ್ ಸ್ಥಾಪನೆ, ಶಹಾಪುರ ವಕೀಲರ ಸಂಘದ ಸಹಕಾರ ಮರೆಯುವಂತಿಲ – ಕವಲಿ
ಶಹಾಪುರದಲ್ಲಿ ಮೂರು ದಿವಸ ಕಾರ್ಯನಿರ್ವಹಿಸಲು ಸುರಪುರ ಸಂಘ ಸಹಕರಿಸಲಿ - ದೇಶಮುಖ

ಸುರಪುರದಲ್ಲಿ 2ನೇ ಜಿಲ್ಲಾ ಹೆಚ್ಚುವರಿ ಸೇಷನ್ಸ್ ಕೋರ್ಟ್ ಸ್ಥಾಪನೆ, ಶಹಾಪುರ ವಕೀಲರ ಸಂಘದ ಸಹಕಾರ ಮರೆಯುವಂತಿಲ – ಕವಲಿ
ಶಹಾಪುರಃ ಸುರಪುರಕ್ಕೆ ನೂತವಾಗಿ 2ನೇ ಹೆಚ್ಚುವರಿ ಸೇಷನ್ಸ್ ನ್ಯಾಯಾಲಯ ಮಂಜೂರಾತಿ ಪಡೆಯುವಲ್ಲಿ ಶಹಾಪುರ ವಕೀಲರ ಸಂಘದ ಸಹಕಾರ ಮರೆಯುವಂತಿಲ್ಲ. ಎರಡು ಸಂಘದವರು ಸಾಂಘಿಕವಾಗಿ ಹೋರಾಟ ಹಾಗೂ ನಿಯೋಗವನ್ನು ತೆಗೆದುಕೊಂಡು ಉನ್ನತಾಧಿಕಾರಿಗಳನ್ನು ಭೇಟಿಯಾದ ಪರಿಣಾಮ ಸುರಪುರದಲ್ಲಿ 2ನೇ ಜಿಲ್ಲಾ ಹೆಚ್ಚುವರಿ ಸೇಷನ್ಸ್ ಕೋರ್ಟ್ ಸ್ಥಾಪನೆಗೆ ಹಸಿರು ನಿಶಾನೆ ತೋರಿಸಿದೆ ಎಂದು ಸುರಪುರ ವಕೀಲರ ಸಂಘದ ನೂತನ ಅಧ್ಯಕ್ಷ ರಮಾನಂದ ಕವಲಿ ತಿಳಿಸಿದರು.
ನಗರ ವಕೀಲರ ಸಂಘಕ್ಕೆ ಬುಧವಾರ ಅವರು ಭೇಟಿ ನೀಡಿದಾಗ ಸಂಘದ ಪರವಾಗಿ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಬರುವ ದಿನಗಳಲ್ಲಿ ಎರಡು ಸಂಘದವರು ಜಂಟಿಯಾಗಿ ಸರ್ಕಾರದ ಮೇಲೆ ಒತ್ತಡ ಹೇರಿ ಹಣಕಾಸು ಪ್ರಸ್ತಾವನೆಗೆ ಅನುಮೋದನೆ ಪಡೆಯಲು ಹೆಚ್ಚು ಶ್ರಮವಹಿಸಬೇಕಾಗುತ್ತದೆ. ಸುರಪುರದಲ್ಲಿ ಪೀಠ ಸ್ಥಾಪನೆಯಾದ ಕೆಲ ದಿನಗಳ ನಂತರ ಶಹಾಪುರದಲ್ಲಿಯೂ ಮೂರು ದಿನ ನ್ಯಾಯಾಲಯದ ಕಲಾಪ ನಡೆಸಲು ಅನುಕೂಲ ಮಾಡಿಕೊಡುವಂತೆ ಎಲ್ಲರೂ ಸೇರಿಕೊಂಡು ಒತ್ತಡ ಹಾಕಿ ಕಕ್ಷಿದಾರರ ಹಿತ ಕಾಪಾಡೋಣ’ ಎಂದರು.
ಶಹಾಪುರ ವಕೀಲರ ಸಂಘದ ಅಧ್ಯಕ್ಷ ಸಂತೋಷ ದೇಶಮುಖ ಮಾತನಾಡಿ, “1980ರಲ್ಲಿ ಸುರಪುರ ನ್ಯಾಯಾಲಯದಲ್ಲಿ ಎಲ್ಲಾ ಹಿರಿಯವರು ವೃತ್ತಿ ಕೆಲಸ ನಿರ್ವಹಿಸಿದ್ದಾರೆ. ನಂತರ ಶಹಾಪುರಕ್ಕೆ ಹೊಸ ನ್ಯಾಯಾಲಯ ಸ್ಥಾಪನೆಗೊಂಡ ಬಳಿಕ ಇಲ್ಲಿ ಸೇವೆ ಆರಂಭಿಸಿದೇವು. ನಮ್ಮ ಸಂಘವು ಎಲ್ಲಾ ಸಹಕಾರ ನೀಡುತ್ತದೆ. ಅದರ ಜೊತೆಗೆ ಆದಷ್ಟು ತ್ವರಿತವಾಗಿ ವಾರದಲ್ಲಿ ಮೂರು ದಿನ ಕಲಾಪ ನಡೆಸುವಂತೆ ಜಾರಿ ಮಾಡಿಸುವುದು ಅಗತ್ಯವಾಗಿದೆ. ಇದಕ್ಕೆ ಸುರಪುರ ವಕೀಲರ ಸಂಘವು ಸಂಪೂರ್ಣ ಸಹಕಾರ ನೀಡಬೇಕು ನೀಡಲಿದ್ದಾರೆಂಬ ಭರವಸೆ ನನ್ನಲ್ಲಿದೆ ಎಂದರು.
ಸುರಪುರ ವಕೀಲರ ಸಂಘದ ಕಾರ್ಯದರ್ಶಿ ನಂದಕುಮಾರ, ಉಪಾಧ್ಯಕ್ಷ ಹಣಮಂತ ಕಟ್ಟಿಮನಿ, ಸಂತೋಷ, ಭೀಮಣ್ಣಗೌಡ ಪಾಟೀಲ್, ಶರಣಪ್ಪ ಪ್ಯಾಟಿ, ಸತ್ಯಮ್ಮ ಹೊಸಮನಿ, ಭೀಮರಾಜ ಹಾಗೂ ಹಿರಿಯ ವಕೀಲರಾದ ದೇವಿಂದ್ರಪ್ಪ ಬೇವಿನಕಟ್ಟಿ, ಚಂದ್ರಶೇಖರ ದೇಸಾಯಿ, ರಮೇಶ ದೇಶಪಾಂಡೆ, ಸಯ್ಯದ ಇಬ್ರಾಹಿಂಸಾಬ್ ಜಮದಾರ, ವಿಶ್ವನಾಥರಡ್ಡಿ ಸಾಹು, ಯೂಸೂಫ್ ಸಿದ್ದಕಿ, ಟಿ.ನಾಗೇಂದ್ರ, ಮಲ್ಕಪ್ಪ ಪಾಟೀಲ್, ಸಾಲೋಮನ್, ಎಚ್.ಆರ್.ಪಾಟೀಲ್, ಮಲ್ಲಿಕಾರ್ಜುನ ಬುಕ್ಕಲ್ ಇತರರಿದ್ದರು.