ಶಹಾಪುರ ವಕೀಲರ ಸಂಘಃ ಚುನಾವಣೆ ನಡೆಸಲು ಸಿದ್ದಿಕಿ ಆಗ್ರಹ
ಏ.22 ರಂದು ವಿಶೇಷ ಸಭೆ ಮಹತ್ವದ ನಿರ್ಧಾರ- ಸಿದ್ದಿಕಿ
ಅವಧಿ ಮೀರಿದ್ದು, ಚುನಾವಣೆಗೆ ಸಜ್ಜುಗೊಳಿಸಲು ಒತ್ತಾಯ
ಏ.22 ರಂದು ವಿಶೇಷ ಸಭೆ ಮಹತ್ವದ ನಿರ್ಧಾರ- ಸಿದ್ದಿಕಿ
yadgiri, ಶಹಾಪುರಃ ತಾಲೂಕು ವಕೀಲರ ಸಂಘದ ಆಡಳಿತ ಅವಧಿ ಮಾರ್ಚ್ 31 ಕ್ಕೆ ಮುಗಿದಿದ್ದು, ಪ್ರಸಕ್ತ 2022-23 ರ ಸಂಘದ ಆಡಳಿತ ಮಂಡಳಿ ಆಯ್ಕೆ ಅಂಗವಾಗಿ ಚುನಾವಣೆಗೆ ಸಿದ್ಧಗೊಳಿಸುವಂತೆ ಲಿಖಿತ ಮತ್ತು ಮೌಖಿಕವಾಗಿ ತಿಳಿಸಿದರೂ ಸಂಘದ ಅಧ್ಯಕ್ಷರು ಯಾವುದಕ್ಕೂ ಉತ್ತರ ನೀಡದೆ ನಿರ್ಲಕ್ಷವಹಿಸುತ್ತಿದ್ದಾರೆ ಎಂದು ಹಿರಿಯ ವಕೀಲ ಇಸೂಬ್ ಸಿದ್ಧಿಕಿ ಆರೋಪಿಸಿದರು.
ನಗರದ ನ್ಯಾಯಾಲಯದ ವಕೀಲರ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮೊದಲಿನಿಂದಲೂ ಇಲ್ಲಿನ ವಕೀಲರ ಸಂಘ ಪ್ರತಿ ವರ್ಷಕ್ಕೊಮ್ಮೆ ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ನಡೆಸುತ್ತಾ ಬರಲಾಗಿದೆ. ಪ್ರಸಕ್ತ ವರ್ಷ ಈ ಸಮಯದಲ್ಲಿ ಚುನಾವಣೆ ನಡೆಸಬೇಕಿತ್ತು. ಆದರೆ ಪ್ರಸ್ತುತ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಚುನಾವಣೆ ನಡೆಸಲು ಸಿದ್ಧರಿರುವದಿಲ್ಲ. ನಾವುಗಳು ನೀಡಿದ ಯಾವುದೆ ನೋಟಿಸ್‍ಗೆ ಉತ್ತರ ನೀಡುತ್ತಿಲ್ಲ. ಸರ್ವಾಧಿಕಾರಿ ಧೋರಣೆ ತೋರುತ್ತಿರುವದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಏ.4 ರಂದು ಕಾರ್ಯದರ್ಶಿ ವಿರುದ್ಧ ಅವಿಶ್ವಾಸ ಮಂಡನೆ ಕುರಿತು ಚರ್ಚಿಸಲು ಸಭೆ ಕರೆಯುವಂತೆ ಮನವಿ ಮಾಡಲಾಗಿತ್ತು. ಅದಕ್ಕೂ ಉತ್ತರಿಸದ ಅಧ್ಯಕ್ಷರು ನಿರ್ಲಕ್ಷವಹಿಸಿರುವದೇಕೆ.?
ಇಲ್ಲಿನ ಬಾರ್‍ನಲ್ಲಿ ಸರ್ವ ಸದಸ್ಯರ ಸಭೆಯಲ್ಲಿ ಈ ಮೊದಲು ನಿರ್ಣಯಕೈಗೊಂಡಂತೆ ಪ್ರತಿ ವರ್ಷಕ್ಕೊಮ್ಮೆ ಚುನಾವಣೆ ನಡೆಯಬೇಕು. ಇಲ್ಲವಾದಲ್ಲಿ ಇದೇ ಏ.22 ರಂದು ಹಿರಿಯ ನ್ಯಾಯವಾದಿಗಳ ಸಮ್ಮುಖದಲ್ಲಿ ಸಭೆ ಕರೆಯಲಾಗಿದ್ದು, ಅಡಳಿತ ಮಂಡಳಿಯ ವಿರುದ್ಧ ಅವಿಶ್ವಾಸ ಮಂಡನೆ ಕುರಿತು ಚರ್ಚಿಸಲಾಗುವದು. ಹಿರಿಯರ ಸಲಹೆಯಂತೆ ಮುಂದಿನ ನಿರ್ಧಾರಕೈಗೊಳ್ಳಲಾಗುವದು ಎಂದು ಅವರು ಎಚ್ಚರಿಸಿದರು. ವಕೀಲ ಸಂತೋಷ ದೇಶಮುಖ ಮಾತನಾಡಿ, ಒಟ್ಟು 167 ಜನಕ್ಕೂ ಅಧಿಕ ಜನ ಸದಸ್ಯರಿದ್ದು, ಸುಮಾರು 67 ಕ್ಕೂ ಹೆಚ್ಚು ಜನ 22 ರಂದು ಕರೆದ ಹಿರಿಯರ ಸಭೆಯಲ್ಲಿ ಭಾಗವಹಿಸಿ ಚುನಾವಣೆ ನಡೆಸುವ ಕುರಿತು ಮತ್ತು ಅವಿಶ್ವಾಸ ಮಂಡನೆ ಬಗ್ಗೆ ಚರ್ಚಿಸಲು ಆಸಕ್ತವಹಿಸಿದ್ದಾರೆ ಎಂದರು. ವಕೀಲ ಮಲ್ಲಿಕಾರ್ಜುನ ಬಕ್ಕಲ್ ಉಪಸ್ಥಿತರಿದ್ದರು.