ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಅಂನೌಸಂಘ ಪ್ರತಿಭಟನೆ
ಹಳೆ ಮೊಬೈಲ್ ಪಡೆದು ಹೊಸ ಮೊಬೈಲ್ ನೀಡಲು ಆಗ್ರಹ
ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಅಂನೌಸಂಘ ಪ್ರತಿಭಟನೆ
ಹಳೆ ಮೊಬೈಲ್ ಪಡೆದು ಹೊಸ ಮೊಬೈಲ್ ನೀಡಲು ಆಗ್ರಹ
yadgiri, ಶಹಾಪುರಃ ದೇಶದಲ್ಲಿ ಅತ್ಯಂತ ದಯನೀಯ ಸ್ಥಿತಿಯಲ್ಲಿರುವ ಅಂಗನವಾಡಿ ಕೆಲಸಗಾರರನ್ನು ನಿರ್ಲಕ್ಷ ಮಾಡುತ್ತಿರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಮತ್ತು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ಸಿಡಿಪಿಓ ಕಚೇರಿ ಎದುರು ಅಂಗನವಾಡಿ ನೌಕರರ ಸಂಘ ಪ್ರತಿಭಟನೆ ನಡೆಸಿ ಸಿಡಿಪಿಓ ಮೀನಾಕ್ಷಿ ಪಾಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷೆ ಬಸಲಿಂಗಮ್ಮ ನಾಟೇಕಾರ, ನಮಗೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿವೆ. ಆದರೆ ದೇಶದ ಜನಗತೆ ಇಂದಿಗೂ ಹಸಿವು ಮತ್ತು ಅಪೌಷ್ಟಿಕತೆಯಿಂದ ಹೊರ ಬರಲು ಸಾಧ್ಯವಾಗಿಲ್ಲ. ಅಂಕಿ ಅಂಶ ಪ್ರಕಾರ ದೇಶದ ಮಕ್ಕಳ ಮೂರರಲ್ಲಿ ಒಂದ ಮಗು ಕಡಿಮೆ ತೂಕ ಹೊಂದಿದೆ. ಇದರಲ್ಲಿ ಶೇ.68 ರಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ವಿಷಾದನೀಯ ವ್ಯಕ್ತಪಡಿಸಿದರು.
ದೇಶದಲ್ಲಿ ಎರಡು ಕೋಟಿ ಗರ್ಭೀಣಿಯರು, ಹಾಲುಣಿಸುವ ತಾಯಂದಿರು ಹಾಗೂ ಆರು ವರ್ಷದೊಳಗಿನ ಎಂಟು ಕೋಟಿ ಮಕ್ಕಳೀಗೆ ಆರೋಗ್ಯ ವಿಷಯವನ್ನು ತಲುಪಿಸುವ ಕಾರ್ಯವನ್ನು ದೇಶದ 26 ಲಕ್ಷ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರು ತ್ಯಾಗ ಮತ್ತು ಪರಿಶ್ರಮದಿಂದ ಮಾಡುತ್ತಿರುವದು ಕೇಂದ್ರ ಸರ್ಕಾರ ಗಮನಿಸಬೇಕಾದ ಸಂಗತಿಯಾಗಿದೆ.
ಆದರೆ ಅಂಗನವಾಡಿ ನೌಕರರ ಗೋಳು ತೀರದಾಗಿದೆ. ಬದುದಿನಗಳ ಬೇಡಿಕೆಯಾದ ಅಂಗನವಾಡಿ ನೌಕರರನ್ನು ಕಾಯಂಗೊಳಿಸುವದು ಸೇರಿದಂತೆ ನಾಲ್ಕು ವರ್ಷದ ಹಿಂದೆ ಕೊಟ್ಟ ಮೊಬೈಲ್ ಫೋನ್ ವಾಪಸ್ ಪಡೆದು ಹೊಸ ಪೋನ್ ವಿತರಿಸಬೇಕು. ಇತರೆ ಸೌಲಭ್ಯಗಳನ್ನು ಕೂಡಲೇ ಒದಗಿಸುವ ಕೆಲಸವಾಗಬೇಕೆಂದು ಒತ್ತಾಯಿಸಿದರು.
ಸಿಐಟಿಯು ತಾಲೂಕ ಸಂಚಾಲಕ ಮಲ್ಲಯ್ಯ ಪೆÇೀಲಂಪಲ್ಲಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಐಸಿಡಿಎಸ್‍ಯೇತರ ಕೆಲಸಗಳನ್ನು ಹೇರಲಾಗುತ್ತಿದೆ. ಇತರೆ ವಿವಿಧ ಇಲಾಖೆಗಳ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾದ ಅನಿವಾರ್ಯತೆ ನಿರ್ಮಾಣ ಮಾಡಲಾಗುತ್ತಿದ್ದು, ವಿವಿಧ ಸಚಿವರ ಮತ್ತು ಆಡಳಿತ ಪಕ್ಷಗಳ ನೇತಾರರ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಒತ್ತಡ ಹೇರಲಾಗುತ್ತಿದೆ. ಒಂದು ವೇಳೆ ಯಾರಾದರೂ ಇದನ್ನು ಪ್ರಶ್ನೆ ಮಾಡಿದರೆ ಅಂತವರನ್ನು ಟಾರ್ಗೆಟ್ ಮಾಡಿ ಬಲಿಪಶು ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಸ್ಕೀಮ್ ಕೆಲಸಗಾರರನ್ನು ಕಾರ್ಮಿಕ ಕಾಯ್ದೆಯ ವ್ಯಾಪ್ತಿಗೆ ಒಳಪಡಿಸಬೇಕು. ಕಾರ್ಮಿಕ ವಿರೋಧಿ ಲೇಬರ್ ಕೋಡ್‍ಗಳನ್ನು ಹಿಂಪಡೆಯಬೇಕು. ಐಸಿಡಿಎಸ್ ಯಾವುದೇ ಕಾರಣಕ್ಕೂ ಯಾವುದೇ ರೀತಿಯ ಖಾಸಗಿಕರಣ ಮಾಡಬಾರದು. ಅಂಗನವಾಡಿಗಳಲ್ಲಿ ಕಾಪೆರ್Çರೇಟ್ ಸಂಸ್ಥೆಗಳು ಬಂಡವಾಳ ಹೂಡಿಕೆ ಮಾಡಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು. ಮುಂಚಿತವಾಗಿ ನಗರಸಭೆಯಿಂದ ಸಿಡಿಪಿಓ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಜರುಗಿತು.
ವಡಿಗೇರಾ ಅಂನೌಸಂಘದ ಅಧ್ಯಕ್ಷೆ ಇಂದಿರಾದೇವಿ ಕೊಂಕಲ್, ಕಾರ್ಯದರ್ಶಿ ಚಂದಮ್ಮ ನಾಯ್ಕಲ್, ಯಮನಮ್ಮ ದೋರನಹಳ್ಳಿ, ಉಪಾಧ್ಯಕ್ಷೆ ರಾಜೇಶ್ವರಿ ಶಿರವಾಳ ಮಾತನಾಡಿದರು.
ಖಜಾಂಚಿ ಲಕ್ಷ್ಮೀ ಶಹಾಪುರ, ಮಹಾದೇವಿ ತಡಿಬಿಡಿ, ರೇಣುಕಾ ಗೋಗಿ, ಸಂಪತ್ತಮ್ಮ ಚಾಮನಾಳ, ಸುಭದ್ರ, ಶಾರದಾದೇವಿ ನಂದಿಹಳ್ಳಿ, ಮಹಾನಂದ ಸಗರ್, ಮಡಿವಾಳಮ್ಮ ಹೂಗಾರ್, ಶ್ರೀದೇವಿ, ಸಂಗೀತ ಹೈಯ್ಯಾಳ, ಮಂಜುಳಾ ವನದುರ್ಗ, ಅಕ್ಷರ ದಾಸೋಹ ನೌಕರ ಸಂಘದ ಗೌರವ ಅಧ್ಯಕ್ಷೆ ಸುನಂದ ಹಿರೇಮಠ, ಅಧ್ಯಕ್ಷೆ ಹನುಮಂತಿ ಮೌರ್ಯ, ಕಾರ್ಯದರ್ಶಿ ಈರಮ್ಮ ಹೈಯ್ಯಳ್ಕರ್, ಅರಣ್ಯ ಇಲಾಖೆಯ ಮಲಿರ್ಂಗಪ್ಪ ಮಕಾಶಿ, ಭೀಮರೆಡ್ಡಿ, ನಿಂಗಣ್ಣ ನಾಟೇಕಾರ್ ಸೇರಿದಂತೆ ಇತರರಿದ್ದರು.
——————