Homeಅಂಕಣಪ್ರಮುಖ ಸುದ್ದಿವಿನಯ ವಿಶೇಷ
ಅರ್ಜುನನ ಸ್ಮಾರಕ ನಿರ್ಮಾಣಕ್ಕೆ ನೆರವಾದ ನಟ ದರ್ಶನ್
ಮೈಸೂರು ದಸರಾ ಆನೆ ಅರ್ಜುನನ ಸ್ಮಾರಕ ನಿರ್ಮಾಣಕ್ಕೆ ನೆರವು ನೀಡುವುದಾಗಿ ಮಾತುಕೊಟ್ಟಿದ್ದ ನಟ ದರ್ಶನ್ ಕೊಟ್ಟಮಾತಿನಂತೆ ಕಲ್ಲುಗಳನ್ನು
ಕಳುಹಿಸಿಕೊಟ್ಟಿದ್ದಾರೆ.
ಸ್ಮಾರಕ ನಿರ್ಮಾಣಕ್ಕೆ ಗ್ರಾನೈಟ್ ಕಲ್ಲನ್ನು ನಟ ತೂಗುದೀಪ್ ದರ್ಶನ್ ಕಳುಹಿಸಿದ್ದು ಆನೆಯ ಅಂತಿಮ ಸಂಸ್ಕಾರ ನಡೆದ ಜಾಗ
ಸಕಲೇಶಪುರದ ಯಸಳೂರು ಸಮೀಪದ ದಬ್ಬಳ್ಳಿ ಕಟ್ಟೆ ನೆಡುತೋಪಿಗೆ ಕಲ್ಲುಗಳು ತಲುಪಿದ್ದವು. ಮಳೆಗಾಲ ಶುರುವಾಗುವ ಮುನ್ನ ಸಮಾಧಿ ನಿರ್ಮಾಣ ಕೆಲಸ ಆರಂಭವಾಗಲಿ ಎಂದು ನಟ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು.