ಶಾಂತಿಯುತವಾಗಿ, ಸರಳವಾಗಿ ಆಚರಿಸಲು ಪಿಐ ಹಿರೇಮಠ ಕರೆ
ಬಕ್ರೀದ್ ಹಬ್ಬಃ ಕೊರೊನಾ ನಿಯಮ ಪಾಲಿಸಿ
yadgiri, ಶಹಾಪುರಃ ಮುಸ್ಲಿಂಬಾಂಧವರು ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು. ಎಲ್ಲೆಡೆ ಕೊರೊನಾ ಮಹಾಮಾರಿ ತನ್ನ ಕಬಂಧಬಾಹು ಚಾಚಿದ್ದು, ಎಲ್ಲರೂ ಕೊರೊನಾ ನಿಮಗಳನ್ನು ಕಡ್ಡಾಯವಾಗಿ ಪಾಲಿಸುವ ಜೊತೆಗೆ ಹಬ್ಬವನ್ನು ಶಾಂತಿಯುತವಾಗಿ ಸರಳವಾಗಿ ಆಚರಿಸಬೇಕೆಂದು ಪಿಐ ಚನ್ನಯ್ಯ ಹಿರೇಮಠ ಮನವಿ ಮಾಡಿದರು.

ನಗರದ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದಂಗವಾಗಿ ಕರೆದ ಸಭೆಯಲ್ಲಿ ಅವರು ಮಾತನಾಡಿದರು. ಜುಲೈ 21 ರಂದು ನಡೆಯಲಿರುವ ಬಕ್ರೀದ್ ಮುಸ್ಲಿಂಬಾಧವರಿಗೆ ಎರಡನೇಯ ದೊಡ್ಡ ಹಬ್ಬ. ಆದರೆ ಕಳೆದ ಸರಿ ಸುಮಾರು ಎರಡು ವರ್ಷದಿಂದ ಕೊರೊನಾ ಮಹಾಮಾರಿಯಿಂದಾಗಿ ಎಲ್ಲಾ ಹಬ್ಬಹರಿದಿನಗಳು ಸಂಭ್ರಮದಿಂದ ಆಚರಿಸದಂತ ಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ ಕೋವಿಡ್ ನಿಯಮಗಳು ಜಾರಿಯಲ್ಲಿದ್ದು, ಸರ್ವರೂ ನಿಯಮ ಪಾಲನೆ ಮಾಡುವ ಮೂಲಕ ಕೊರೊನಾ ತಡೆಗೆ ಶ್ರಮಿಸಬೇಕು.
ಅಲ್ಲದೆ ಪ್ರಾಣಿ ವಧೆ, ಬಲಿಯಂತ ಕಾರ್ಯಕ್ರಮಗಳು ಸಹ ರಸ್ತೆ ಮೇಲಾಗಲಿ, ಸಾರ್ವಜನಿಕ ಸ್ಥಳ ಸೇರಿದಂತೆ ದೇವಸ್ಥಾನ, ಮಸೀದಿ ಸಾಮೂಹಿಕವಾಗಿ ನಡೆಸಲು ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಮುಸ್ಲಿಂಬಾಂಧವರು ನಗರದಲ್ಲಿ ಇತರೆ ಧರ್ಮದವರೊಂದಿಗೆ ಅನ್ಯೋನ್ಯವಾಗಿದ್ದು, ಪರಸ್ಪರರ ಹಬ್ಬ ಹರಿದಿನಗಳಲ್ಲಿ ಶುಭಾಶಯಗಳನ್ನು ವಿನಿಮಯಮಾಡಿಕೊಳ್ಳುವ ಮೂಲಕ ಯಾವುದೇ ಘಟನೆಗೆ ಅವಕಾಶ ಕಲ್ಪಿಸಿದ ಕಪ್ಪು ಚುಕ್ಕೆಗಳಿಲ್ಲ. ಅದರಂತೆ ಯಾವುದೇ ಅಹಿತಕರ ಘಟನೆ ಜರುಗದಂತೆ ಹಿರಿಯರು, ಪ್ರಮುಖರು ಎಚ್ಚರಿಕೆವಹಿಸಬೇಕು. ಅಂತಹ ಪ್ರಸಂಗ ಕಂಡು ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ತಿಳಿಸಿದರು. ಹಬ್ಬದ ಹೆಸರಲ್ಲಿ ಯಾವುದೇ ಅನಾಚಾರ ಕೆಲಸಕ್ಕೆ ಮುಂದಾದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಸರ್ವರೂ ಕೊರೊನಾ ನಿಯಮಗಳನ್ನು ಪಾಲಿಸಬೇಕು. ಸಾಮೂಹಿಕ ನಮಾಜ್‍ಗೆ ಈ ಬಾರಿಯು ಅವಕಾಶ ಇರುವದಿಲ್ಲ. ಮಸೀದಿಯಲ್ಲಿ ಕೇಲವ 50 ಜನರಿಗೆ ನಮಾಝ್ ಮಾಡಲು ಅವಕಾಶ ನೀಡಿದ್ದು, ಆದರೆ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಅಗತ್ಯವಾಗಿ ನೆರವೇರಿಸಬೇಕೆಂದು ಸೂಚಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಮುಖಂಡರಾದ ಲಾಲನಸಾಬ ಖುರೇಶಿ, ಸಯ್ಯದ್ ಖಾದ್ರಿ, ಎಸ್ಡಿಪಿಐನ ಖಾಲಿದ್‍ಸಾಬ, ಪಾಶಾ ಪಟೇಲ್ ಸೇರಿದಂತೆ ಇತರರು ಭಾಗವಹಿಸಿದ್ದರು.