ಪ್ರಮುಖ ಸುದ್ದಿ
ನ.15 ರಂದು ಶಾರದಳ್ಳಿಯಲ್ಲಿ ಬಾಪುಗೌಡ ಪುತ್ಥಳಿ ಅನಾವರಣ
ಶಾರದಹಳ್ಳಿಯಲ್ಲಿ ಬಾಪುಗೌಡ ದರ್ಶನಾಪುರ ಪುತ್ಥಳಿ ಅನಾವರಣ
ಶಾರದಹಳ್ಳಿಯಲ್ಲಿ ಬಾಪುಗೌಡ ದರ್ಶನಾಪುರ ಪುತ್ಥಳಿ ಅನಾವರಣ
ನ.15 ರಂದು ಶಾರದಳ್ಳಿಯಲ್ಲಿ ಬಾಪುಗೌಡ ಪುತ್ಥಳಿ ಅನಾವರಣ
yadgiri, ಶಹಾಪುರಃ ತಾಲೂಕಿನ ಶಾರದಹಳ್ಳ ಗ್ರಾಮದಲ್ಲಿ ಅಭಿಮಾನಿಗಳು ನಿರ್ಮಿಸಿದ ದಿ.ಬಾಪುಗೌಡ ದರ್ಶನಾಪುರ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಇದೇ ನ.15 ರಂದು ಬೆಳಗ್ಗೆ 11-30 ಕ್ಕೆ ನಡೆಯಲಿದೆ ಎಂದು ಪುತ್ಥಳಿ ಪ್ರತಿಷ್ಠಾನ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದು ಸುರಪುರ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಉದ್ಘಾಟಿಸಲಿದ್ದು, ರಸ್ತಾಪುರದ ಶರಭಲಿಂಗೇಶ್ವರ ದೇವಸ್ಥಾನದ ಶರಭೇಶಯ್ಯ ಸ್ವಾಮಿಗಳು ಸಾನ್ನಿಧ್ಯವಹಿಸಲಿದ್ದು, ಕಾಂಗ್ರೆಸ್ ಮುಖಂಡರಾದ ಬಸವರಾಜಪ್ಪಗೌಡ ದರ್ಶನಾಪುರ ಅಧ್ಯಕ್ಷತೆವಹಿಸಲಿದ್ದಾರೆ. ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಸೇರಿದಂತೆ ಮುಖ್ಯ ಅಥಿತಿಗಳಾಗಿ ಗಣ್ಯರು, ಪ್ರಮುಖರು ಆಗಮಿಸಲಿದ್ದು, ಅಭಿಮಾನಿ ವರ್ಗ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮುಖಂಡರಾದ ಮಲ್ಲನಗೌಡ ಶಾರದಹಳ್ಳಿ, ಕೆಇಬಿ ಕಾಂಟ್ರ್ಯಾಕ್ಟರ್ ವಿನೋದರಡ್ಡಿ ಶಾರದಹಳ್ಳಿ ಮನವಿ ಮಾಡಿದ್ದಾರೆ.