ಪ್ರಮುಖ ಸುದ್ದಿ

ಬೆಳಗಾವಿಃ ವಿಧವೆಯರಿಗೆ 8 ಸಾವಿರ ಮನೆ ಮಂಜೂರು- ಕವಟಗಿಮಠ

ವಿಧವೆಯರಿಗೆ 8 ಸಾವಿರ ಮನೆ ಮಂಜೂರು- ಕವಟಗಿಮಠ

ಚಿಕ್ಕೋಡಿ: ಸಮಾಜದಲ್ಲಿ ತುಳಿತಕ್ಕೆ ಒಳಗಾದ ಬೆಳಗಾವಿ ಜಿಲ್ಲೆಯ ವಿಧವೆಯರಿಗಾಗಿ 8 ಸಾವಿರ ಮನೆ ಮಂಜೂರು ಮಾಡಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ತಾಲೂಕಿನ 9 ಗ್ರಾಮ ಪಂಚಾಯತಿಯ 120 ಮನೆಗಳು ಮಂಜೂರಾಗಿವೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.

ನಗರದ ಸಿಎಲ್ ಇ ಸಂಸ್ಥೆಯ ಸಭಾ ಭವನದಲ್ಲಿ ರಾಜೀವ ಗಾಂಧಿ ವಸತಿ ನಿಗಮ ಬೆಂಗಳೂರು ಇವರ ವತಿಯಿಂದ ದೇವರಾಜ ಅರಸು ವಿಶೇಷ ವಸತಿ ಯೋಜನೆಯಡಿ ಚಿಕ್ಕೋಡಿ ಸದಲಗಾ ಕ್ಷೇತ್ರದ ವಿವಿಧ ಗ್ರಾಮ ಪಂಚಾಯತಿಗಳ ವಸತಿ ರಹಿತ ವಿಧವೆಯರಿಗೆ ಮನೆಗಳ ಹಕ್ಕು ಪತ್ರ ವಿತರಣೆ ಮಾಡಿ ಅವರು ಮಾತನಾಡಿದರು.

ರಾಜ್ಯದಲ್ಲಿ 10 ಸಾವಿರ ಮನೆ ನೀಡುವ ಗುರಿ ಹೊಂದಲಾಗಿದೆ. ಅದಕ್ಕನುಗುಣವಾಗಿ ಸದುಪಯೋಗ ಪಡಿಸಿಕೊಳ್ಳಲಾಗಿದೆ.

ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ  ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗಿದೆ.

ಸಮಾಜದ ಋಣ ತೀರಿಸಲು ಬಡ ಜನರ, ನೊಂದವರ ಸೇವೆ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಸರಕಾರದ ಹಲವಾರು ಜನೋಪಯೋಗಿ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ಕಾರ್ಯ ಮಾಡಲಾಗುವದು ಎಂದರು.

ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ ಮತ್ತು ಸಂಪಾದನ್ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ವೇದಿಕೆ ಮೇಲೆ ತಹಶೀಲ್ದಾರ ಎನ್.ಬಿ.ಗೆಜ್ಜಿ. ಭರತೇಶ ಬನವಣೆ, ತಾ.ಪಂ ಕಾರ್ಯನಿರ್ವಹಕ ವೀರಣ್ಣ ವೀರನ್ನವರ, ಶೈಲಜಾ ಪಾಟೀಲ, ಪುರಸಭೆ ಉಪಾಧ್ಯಕ್ಷ ಸಂಜಯ ಕವಟಗಿಮಠ,‌ ಸತೀಶ‌ ಅಪ್ಪಾಜಿಗೋಳ ಉಪಸ್ಥಿತಿ ಇದ್ದರು.

 

Related Articles

Leave a Reply

Your email address will not be published. Required fields are marked *

Back to top button