ಚಾರ್ಮಾಡಿಘಾಟಃ ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ

ಬಿದಿರುತಳ ಗ್ರಾಮಕ್ಕೆ ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ- ಹುಡುಕಾಟ
ಕೊಟ್ಟಿಗೆಹಾರಃ ಮನೆ ನಿರ್ಮಾಣ ಕೆಲಸಕ್ಕೆಂದು ಬಿದಿರುತಳ ಗ್ರಾಮಕ್ಕೆ ತೆರಳಿದ್ದ ವ್ಯಕ್ತಿಯೋರ್ವ ನಾಪತ್ತೆಯಾಗಿದ್ದು, ಪತ್ನಿ ನೀಡಿದ ದೂರಿನನ್ವಯ ಪೊಲೀಸರು ಮತ್ತು ಗ್ರಾಮಸ್ಥರು ಹುಡುಕಾಟ ನಡೆಸಿದರಯ ವ್ಯಕ್ತ ಪತ್ತೆಯಾಗಲಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಬಾಳೂರಿನ ನಾಗೇಶ ಆಚಾರ್ (46) ಎಂಬಾತನೇ ನಾಪತ್ತೆಯಾಗಿದ್ದು, ಈ ಕೆಲ ದಿನಗಳ ಹಿಂದೆ ಬಿದಿರುತಳ ಗ್ರಾಮಕ್ಕೆ ಮನೆ ನಿರ್ಮಾಣ ಕೆಲಸಕ್ಕೆಂದು ಬಂದಿದ್ದ ಎನ್ನಲಾಗಿದೆ. ಶನಿವಾರದಿಂದ ಈತ ಕಾಣೆಯಾಗಿದ್ದು, ಗ್ರಾಮಸ್ಥರು, ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ.
ಪೊಲೀಸ್ ಠಾಣೆಗೆ ಪತ್ನಿ ದೂರು ನೀಡಿದ್ದು, ಪೊಲೀಸರ ಸಮೇತ ಅರಣ್ಯ ಪ್ರದೇಶದಲ್ಲಿ ಹುಡುಕಾಟ ನಡೆಸಲಾಗುತ್ತಿದ್ದು, ಯಾವುದೇ ಕುರುಹುಗಳು ಸಹ ದೊರೆತಿರುವದಿಲ್ಲ ಎನ್ನಲಾಗಿದೆ.
ಬಿದಿರುತಳ ಗ್ರಾಮ ಚಾರ್ಮಾಡಿ ಘಾಟ ಅರಣ್ಯದ ನಡುವೆ ಇರುವೆ ಗ್ರಾಮ ಇದಾಗಿದ್ದು, ಪತ್ನಿ ಸುಮಾ ನಾಗೇಶ್ ನಾಪತ್ತೆ ಕುರಿತು ದೂರು ಸಲ್ಲಿಸಿದ್ದಾರೆ.
ದೂರು ದಾಖಲಿಸಿಕೊಂಡು ಬಾಳೂರ ಠಾಣೆ ಪಿಎಸ್ಐ ರೇಣುಕಾ ಗ್ರಾಮದ 150 ಜನರು ಸೇರಿದಂತೆ ತಮ್ಮ ಸಿಬ್ಬಂದಿ ಜೊತೆ ಅರಣ್ಯದಲ್ಲಿ ಹುಡುಕಾಟ ನಡೆಸಿದ್ದಾರೆ ಆದಾಗ್ಯೂ ನಾಗೇಶ್ ಪತ್ತೆಯಾಗಿಲ್ಲ. ಹೀಗಾಗಿ ಕುಟುಂಬಸ್ಥರು ಕಳವಳ ವ್ಯಕ್ತಪಡಿಸಿದ್ದು, ಚಿಂತಾಕ್ರಾಂತರಾಗಿದ್ದಾರೆ ಎನ್ನಲಾಗಿದೆ.