Home

ಶಾಸಕ ಸೋಮಶೇಖರಡ್ಡಿ ಕಾಂಗ್ರೆಸ್ ಪರ ವಾಲಿದರೆ.? ಏನಿದು ಮರ್ಮ

ಬಳ್ಳಾರಿ ಧಣಿಗೆ ಟಗರು ಬುಲಾವ್.!

ಶಾಸಕ ಸೋಮಶೇಖರಡ್ಡಿ ಕಾಂಗ್ರೆಸ್ ಪರ ವಾಲಿದರೆ.? ಏನಿದು ಮರ್ಮ

ಮಲ್ಲಿಕಾರ್ಜುನ ಮುದ್ನೂರ

ವಿವಿ ಡೆಸ್ಕ್ಃ ಬಳ್ಳಾರಿಯ ಧಣಿ ಜನಾರ್ಧನ ರಡ್ಡಿಯ ಸಹೋದರ ಬಿಜೆಪಿ ಶಾಸಕ ಸೋಮಶೇಖರಡ್ಡಿ ಅವರನ್ನು ವಿಪಕ್ಷ ನಾಯಕ ಸಿದ್ರಾಮಯ್ಯ ಕಾಂಗ್ರೆಸ್ ಗೆ ಬರುತ್ತಿರೇನ್ರಿ ಎಂದು ಕೇಳಿದ್ರಂತೆ. ಅದಕ್ಕೆ ಚುಟುಕಾಗಿ ಚುರುಕಾಗಿ ಉತ್ತರಿಸಿದ ಸೋಮಶೇಖರಡ್ಡಿ, ನನ್ನ ತಮ್ಮನನ್ನು ಕೇಳಿ ಹೇಳುತ್ತೇನೆ ಎಂದು ಹೇಳುವ ಮೂಲಕ‌ ಟಗರಿಗೆ ಡಿಚ್ಚಿ ನೀಡಿದ್ದಾರೆ ಎನ್ನಬಹುದು.

ಕಾಂಗ್ರೆಸ್ ನವರು ಸದನದಲ್ಲಿ‌ ಧರಣಿ ನಡೆಸುತ್ತಿದ್ದರು. ನಾನು ನನ್ನ ಫೈಲ್ ಮರೆತು ಬಂದಿದ್ರಿಂದ ಮರಳಿ ಹೋದೆ, ಆಗ ಸಿದ್ರಾಮಯ್ಯ ನನ್ನ ಕರೆದು ಕಾಂಗ್ರೆಸ್ ಗೆ ಬರ್ತಿರೇನ್ರಿ‌ ಎಂದು ಕೇಳಿದರು. ನಾನು ತಮ್ಮನನ್ನು ಕೇಳಿ ಹೇಳುವೆ ಎಂದು ವಾಪಾಸಾದೆ ಎಂದ ಅವರು,‌‌

ಕಾಂಗ್ರೆಸ್ ಹೈಕಮಾಂಡ್ ನಮಗೆ ಸಾಕಷ್ಟು ಕಿರುಕುಳ ನೀಡಿದೆ. ನಾವೇನಾದ್ರೂ ಕಾಂಗ್ರೆಸ್ ಗೆ ಹೋದರೆ ನಮ್ಮಷ್ಟು ದಡ್ಡರಾರಿಲ್ಲ. ನಾವು ಬಿಜೆಪಿಯಲ್ಲಿಯೇ ಉಳಿಯುತ್ತೆವೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಕಾಂಗ್ರೆಸ್ ಬುಲಾವ್ ಎನಿದು ಮರ್ಮ.?

ಕಾಂಗ್ರೆಸ್ ಶತಾಯಗತಾಯ ಬರುವ ಚುನಾವಣೆಯಲ್ಲಿ ಬಹುಮತ ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವ ಹಂಬಲ‌ ಹೊಂದಿದ್ದು, ತಮ್ಮಾಸೆ ಈಡೇರಿಕೆಗೆ ಕೆಲ ಶಾಸಕರನ್ನು ಕಾಂಗ್ರೆಸ್ ಗೆ ಸೆಳೆಯಲೇಬೇಕೆಂಬ ನಿರ್ಣಯಕೈಗೊಂಡಂತಿದೆ. ಹೀಗಾಗಿ ಎಲ್ಲೆಂದರಲ್ಲಿ ಗಾಳ ಹಾಕಲು‌ ಶುರುವಿಟ್ಟಿದೆ ಎನ್ನಬಹುದು.

ಈ ಹಿಂದೆ ಬಳ್ಳಾರಿ ಧಣಿಗಳ ವಿರುದ್ಧ ತೊಡೆ ತಟ್ಟಿದ ಸಿದ್ರಾಮಯ್ಯ, ಇದೀಗ ಅವರನ್ನೆ ಕಾಂಗ್ರೆಸ್ ಗೆ ಕರೆ ತರಲು ಮುಂದಾಗಿರುವದು ಅಧಿಕಾರ ದಾಹ‌ ತೋರಿದರೆ, ರಾಜಕೀಯದಲ್ಲಿ ಯಾವುದು ಶಾಶ್ವತವಲ್ಲ ಎಂಬುದನ್ನು ತೋರುತ್ತದೆ.

ಒಂದು ಕಾಲದಲ್ಲಿ‌ ನೇರಾನೇರ ತೊಡೆ ತಟ್ಟಿದ ಸಿದ್ರಾಮಯ್ಯ- ಬಳ್ಳಾರಿ ಧಣಿಗಳು, ಇದೀಗ ಬಿಜೆಪಿಯಲ್ಲಿ ತೃಪ್ತರಿಲ್ಲ‌ ಎಂದುಕೊಂಡ ಕಾಂಗ್ರೆಸ್ ಬಳ್ಳಾರಿ ಧಣಿಗಳನ್ನು ತಮ್ಮತ್ತ ಸೆಳೆಯಲು ಹವಣಿಸಿದೆ. ಅಥವಾ ಬಿಜೆಪಿಗೂ ಒಂದಿಷ್ಟು ಬಿಸಿ‌ ಮುಟ್ಟಿಸಲು ಸೋಮಶೇಖರಡ್ಡಿ‌ ಅವರ ಸಣ್ಣ ತಂತ್ರಗಾರಿಕೆಯ ಭಾಗವು ಇದಾಗಿದೆ ಎಂದರೂ ತಪ್ಪಿಲ್ಲ.

ಮೇಲ್ನೋಟಕ್ಕೆ ಧಣಿಗಳ ಬುಲಾವ್ ಗೆ ಒಂದು ಕಲ್ಲು ಹೊಡೆದು ನೋಡಿ‌ದ ಸಿದ್ರಾಮಯ್ಯ ಗೆ ಸೋಮಶೇಖರಡ್ಡಿ ತನ್ನ ಸಹೋದರ ಜನಾರ್ಧನರಡ್ಡಿ ಕೇಳಿ ಬರುವುದಾಗಿ ಹೇಳಿರುವದು ನೋಡಿ ತಣ್ಣಗಾದಂತೆ ಅನಿಸುತ್ತಿದೆ.

ಸಹೋದರಲ್ಲಿ‌ ಡಿವೈಡ್ ಮಾಡಿ‌ ಸೋಮಶೇಖರಡ್ಡಿಗೆ ಅಧಿಕಾರದ ಆಸೆ ತೋರಿಸಿ ಕಾಂಗ್ರೆಸ್ ಗೆ ಕರೆ ತರಬೇಕೆಂಬ ನಿಲುವು ಕಾಂಗ್ರೆಸ್ ನಾಯಕರದ್ದಾಗಿರಬಹುದು ಆದರೆ,‌ ಸೋಮಶೇಖರಡ್ಡಿ ಸರಳವಾಗಿ‌ ಜನಾರ್ಧನ ರಡ್ಡಿ ಹೆಸರೇಳುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ನಮಗೆ ಜನಾರ್ಧನರಡ್ಡಿ ‌ಅವರೇ‌ ಈಗಲೂ ಬಾಸ್ ಎಂಬುದನ್ನು ಅವರಿಗೆ ತೋರಿಸಿ ಕೊಟ್ಟಿದ್ದಾರೆ.

ಬಿಜೆಪಿಯಲ್ಲಿ ಸೋಮಶೇಖರಡ್ಡಿಗೆ ಸಚಿವ ಸ್ಥಾನಮಾನ‌ ನೀಡಿಲ್ಲ‌ ಎಂಬ ಕಾರಣ,‌ಇಟ್ಟುಕೊಂಡು ಕಾಂಗ್ರೆಸ್ ಗಾಳ‌ ಬೀಸಿದೆ ಎನ್ನಲಾಗಿದೆ. ಆದರೆ ಬಳ್ಳಾರಿ ಸಹೋದರರು‌ ಜಾಣ ನಡೆ ಪ್ರದರ್ಶನ ಮಾಡುತ್ತಿರುವದು ಉತ್ತಮ ನಿಲುವಾಗಿದೆ.

ಬಳ್ಳಾರಿಯ ಬಿಜೆಪಿ ಶಕ್ತಿಯೇ ಸೋಮಶೇಖರಡ್ಡಿ ‌- ಶ್ರೀರಾಮುಲು

ಸೋಮಶೇಖರಡ್ಡಿ ಬಿಜೆಪಿಗೆ ಹೋಗುವ ಪಮೇಯವೇ ಇಲ್ಲ. ಅವರು‌ ಬಳ್ಳಾರಿ ಭಾಗದ ಬಿಜೆಪಿಯ ಶಕ್ತಿಯಾಗಿದ್ದಾರೆ. ಕಾಂಗ್ರೆಸ್ ನವರು ನನ್ನ ಜೊತೆ ಇರ್ತೀವಿ‌ ಅಂತಾರೆ, ನಮಗೂ ಅವಕಾಶ‌ ಕೊಡಿ ಅಂಥ ಕೇಳ್ತಾರೆ. ಅವೆಲ್ಲ ಸಾಮಾನ್ಯವಾದದು. ಅವರು ಕಾಂಗ್ರೆಸ್ ಗೆ ಹೋಗಲ್ಲ ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button