ಬಿಜೆಪಿ ರಾಜ್ಯಧ್ಯಕ್ಷ ಸ್ಥಾನಕ್ಕೆ ಕಟೀಲ್ ರಾಜೀನಾಮೆ.! ನೂತನ ಸಾರಥ್ಯ ಯಾರಿಗೆ.?
ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿರುವೆ - ನಳೀನ್ ಕುಮಾರ
ಬಿಜೆಪಿ ರಾಜ್ಯಧ್ಯಕ್ಷ ಸ್ಥಾನಕ್ಕೆ ಕಟೀಲ್ ರಾಜೀನಾಮೆ
ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿರುವೆ – ನಳೀನ್ ಕುಮಾರ
ಬಳ್ಳಾರಿಃ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಿರುವೆ ಎಂದು ಸಂಸದ ನಳೀನ್ ಕುಮಾರ ಕಟೀಲು ಮಾಧ್ಯಮಕ್ಕೆ ಹೇಳಿಕೆ ಕೊಟ್ಟಿದ್ದಾರೆ.
ನಗರದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ರಾಜೀನಾಮೆ ಪತ್ರ ಹೀಗಾಗಲೇ ಕೊಟ್ಟಿದ್ದು ಅಲ್ಲದೆ ಮೌಖಿಕವಾಗಿಯು ಹೇಳಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ನೂತನ ರಾಜ್ಯಧ್ಯಕ್ಷ ಯಾರಾಗಲಿದ್ದಾರೆ.?
ಬಿಜೆಪಿ ರಾಜ್ಯಧ್ಯಕ್ಷ ಹುದ್ದೆ ಯಾರ ಪಾಲಾಗಲಿದೆ ಎಂಬುದು ರಾಜ್ಯದಲ್ಲಿ ಬಹುದೊಡ್ಡ ಚರ್ಚೆ ನಡೆಯುತ್ತಿದೆ. ಈ ನಡುವೆ ಮೊದಲಿಂದಲೂ ಸಂಘ ಪರಿವಾರದ ಹಿನ್ನೆಲೆ ಹೊಂದಿದ ವ್ಯಕ್ತಿಯನ್ನು ಬಿಜೆಪಿ ರಾಜ್ಯಧ್ಯಕ್ಷ ಸ್ಥಾನ ಜವಬ್ದಾರಿ ನಿಡುತ್ತಾ ಬಂದಿದೆ.
ಪಕ್ಷದ ನೂತನ ಸಾರಥ್ಯ ಪಢತುವಲ್ಲಿ ಸುನೀಲ್ ಕುಮಾರ, ಸಿ.ಟಿ.ರವಿ., ಶೋಭಾ ಕರಂದ್ಲಾಜೆ ಸೇರಿದಂತೆ ಹಲವರು ಮುಂಚೂಣೆಯಲ್ಲಿ ಹೆಸರು ಕೇಳಿ ಬರುತ್ತಿದ್ದು. ಯಾವುದಕ್ಕೂ ಈ ವಾರದಲ್ಲಿ ನೂತನ ಬಿಜೆಪಿ ರಾಜ್ಯಧ್ಯಕ್ಷರ ಆಯ್ಕೆ ನಡೆತಲಿದೆ ಎಂದು ಹೇಳಲಾಗುತ್ತಿದೆ.