ಕ್ಯಾಂಪಸ್ ಕಲರವಪ್ರಮುಖ ಸುದ್ದಿ

ಕೆರೆ ನೀರು ಮಲೀನಗೊಳಿಸದಿರಿ – ರಾಜೂ ಪಂಚಭಾವಿ

ಉಪಾಧ್ಯಾಯ ಜನ್ಮ ದಿನಾಚರಣೆಃ ನಾಗರ ಕೆರೆ ಸ್ವಚ್ಛತೆಗೆ ಚಾಲನೆ

ಯಾದಗಿರಿಃ ಪಂಡಿತ್ ದೀನ್ ದಯಾಳ ಉಪಾಧ್ಯಾಯ ಅವರ 105 ನೇ ದಿನಾಚರಣೆ ಹಿನ್ನೆಲೆ ಬಿಜೆಪಿ ಯುವ ಮೋರ್ಚಾ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಯುವ ಕಾರ್ಯಕರ್ತರು ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಾಲುಕು ಬಿಜೆಪಿ ಯುವ ಮೊರ್ಚಾ ರಾಜೂ ಪಂಚಭಾವಿ ತಿಳಿಸಿದರು.

ನಗರದ ನಾಗರ ಕೆರೆಯ ದಡದಲ್ಲಿ‌ ಬಿದ್ದ ತ್ಯಾಜ್ಯ ತೆಗೆದು ಸ್ವಚ್ಛಗೊಳಿಸುವ ಶ್ರಮಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಾಗರಿಕರು ಕೆರೆಯಲ್ಲಿ ಬಟ್ಟೆ ಬರೆ, ಪ್ಲಾಸ್ಟಿಕ್ ಮತ್ತು ಮನೆಯಲ್ಲಿ ಪೂಜೆ‌, ಧಾರ್ಮಿಕ ಕಾರ್ಯಕ್ರಮ ಮಾಡಿದ ಹೂಗಳು, ಟೆಂಗಿನ ಕಾಯಿ, ತೋರಣ, ಇತರೆ ಸಾಮಾಗ್ರಿ ತಂದು ಕೆರೆಯಲ್ಲಿ ಎಸೆಯಕೂಡದು.

ಇದರಿಂದ ಕೆರೆ ನೀರು ಕಲುಷಿತಗೊಳ್ಳುತ್ತದೆ. ಕೆರೆ ನೀರು‌ ಸಾರ್ವಜನಿಕರು ಬಟ್ಟೆ ಹೊಗೆಯಲು ಇತರ ಕೆಲಸ ಉಪಯೋಗವಾಗುತ್ತದೆ. ಅಲ್ಲದೆ ಜಾನುವಾರು,‌ ಪಶು ಪಕ್ಷಿಗಳಿಗೆ ಕುಡಿಯಲು ನೀರು ಅನುಕೂಲವಾಗಲಿದೆ.

ತ್ಯಾಜ್ಯ ಎಸೆದು ಕೆರೆ ನೀರು ಕಲುಷಿತಗೊಳಿಸಿದ್ದಲ್ಲಿ ಸಮಸ್ಯೆ ಆಗುತ್ತದೆ. ಕೆರೆಯಲ್ಲಿ ಸದಾ ನೀರು ಸಂಗ್ರಹ ವಿದ್ದಲ್ಲಿ ನಗರದ ಕೊಳವೆಬಾವಿಗಳಲ್ಲಿ ಅಂತರಜಲ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಇಲ್ಲವಾದಲ್ಲಿ ಅಂತರ ಜಲ‌ ಕುಸಿದು ನೀರಿಗಾಗಿ ಜನ ಪರದಾಡುವ ಸ್ಥಿತಿ ಬರಲಿದೆ ಎಂದರು.

ದೀನ ದಯಾಳಜೀ ಅವರ ಸೇವಾ ಕಾರ್ಯ ಆಸಯದಂತೆ ಕಾರ್ಯಕರ್ತರು ಅವರ ಜನ್ಮ ದಿನವನ್ನು ವಿಶಿಷ್ಟವಾಗಿ ದೈಹಿಕವಾಗಿ ಶ್ರಮವಹಿಸುವ ಮೂಲಕ ನಾಗರಿಕ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಕೆರೆಯ ದಡದಲ್ಲಿ ಅಪಾರ ತ್ಯಾಜ್ಯ ಬಿದ್ದಿದ್ದು ಅದನ್ನು ತೆಗೆದು‌ ಹಾಕುವ ಕೆಲಸವನ್ನು ನಾವೆಲ್ಲ ಮಾಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ನಗರ ಪ್ರಾಧಿಕಾರ ಅಧ್ಯಕ್ಷ ಮಲ್ಲಿಕಾರ್ಜುನ ಚಿಲ್ಲಾಳ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗುರು ಕಾಮಾ, ನಗರ ಬಿಜೆಪಿ ಅಧ್ಯಕ್ಷ ದೇವು ಕೋನೇರ,‌ ಎಸ್.ಟಿ.ಮೋರ್ಚಾ ಜಿಲ್ಲಾಧ್ಯಕ್ಷ ರಾಘವೇಂದ್ರ ಯಕ್ಷಿಂತಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಶೇಖರ್ ದೊರೆ, ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಕಂದಕೂರ, ರಾಜ್ಯ ಕಾರ್ಯಕಾರಣಿ ಸದಸ್ಯ ಕರಬಸಪ್ಪ ಬಿರಾಳ, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಗಣಾಚಾರಿ,‌‌ ರಾಜಶೇಖರ ಬೊಮ್ಮನಳ್ಳಿ, ಗೂಳಪ್ಪ ಬಾಳಿ, ಖಾದರ ಬಾಷಾ, ಮಲ್ಲಿಕಾರ್ಜುನ ಜಾಕಾ, ಸಂಗಣ್ಣ ಕುಂಬಾರ, ಸಾಯಬಣ್ಣ ನಾಶಿ, ಶಿವರಾಜ ಜಂಗಳಿ, ರಾಜು ಪಾಟೀಲ್ ತಿಮ್ಮಯ್ಯ, ಯಲ್ಲಾಲಿಂಗ ಯಕ್ಷಿಂತಿ, ಸಿದ್ದು ಕೋಲ್ಕಾರ, ವೆಂಕಟೇಶ್ ಗೌನಳ್ಳಿ ಇತರರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button