ಪ್ರಮುಖ ಸುದ್ದಿ
ಬೆಳಗಾವಿಃ ಸತೀಶ ಜಾರಕಿಹೊಳಿಗೆ ಸೋಲುಣಿಸಿದ ಮಂಗಳಾ ಅಂಗಡಿ
ಬೆಳಗಾವಿಃ ಸತೀಶ ಜಾರಕಿಹೊಳಿಗೆ ಸೋಲುಣಿಸಿದ ಮಂಗಳಾ ಅಂಗಡಿ
ವಿವಿ ಡೆಸ್ಕ್ಃ ಬೆಳಗಾವಿ ಲೋಕಸಭೆ ಚುನಾವಣೆ ಉಪಕದನದಲ್ಲಿ ಕೊನೆಗೂ ಬಿಜೆಪಿ ರೋಚಕ ಗೆಲುವನ್ನು ಸಾಧಿಸಿದೆ.
ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಅವರು ಕಾಂಗ್ರೆಸ್ ಕಾರ್ಯಧ್ಯಕ್ಷ, ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರನ್ನು 2903 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಮತ ಎಣಿಕೆ ಸಂದರ್ಭ ಹಾವು ಏಣಿ ಆಟದಂತೆ ಮತಗಳ ಏರುಪೇರು ನಡೆದು ಕೊನೆಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್ ನ್ನು ಹಿಂದಿಕ್ಕಿ ಗೆಲುವು ಸಾಧಿಸಿದೆ. ದಿ.ಸುರೇಶ ಅಂಗಡಿ ಅವರ ಅನುಕಂಪವು ಕ್ಷೇತ್ರದಲ್ಲಿ ಕೆಲಸ ಮಾಡಿದೆ ಎನ್ನಬಹುದು.