ಬೂದುಗುಂಬಳ ಔಷಧೀಯ ಗುಣ ಹೊಂದಿರುವ ಪೌಷ್ಟಿಕ ಆಹಾರ
ಬೂದುಗುಂಬಳ ಕಾಯಿ ದುಷ್ಟ ಶಕ್ತಿ ತಡೆಗೆ ಮಾತ್ರವಲ್ಲದೆ ಆರೋಗ್ಯ ವೃದ್ಧಿಗೂ ಸಹಕಾರಿ
ಬೂದುಗುಂಬಳ ಔಷಧೀಯ ಗುಣಗಳನ್ನು ಹೊಂದಿರುವ ಅತ್ಯಂತ ಪೌಷ್ಟಿಕ ಆಹಾರ
ಬೂದುಗುಂಬಳ ಕಾಯಿ ದುಷ್ಟ ಶಕ್ತಿ ತಡೆಗೆ ಮಾತ್ರವಲ್ಲದೆ ಆರೋಗ್ಯ ವೃದ್ಧಿಗೂ ಸಹಕಾರಿ
ಬೂದುಗುಂಬಳ ಕಾಯಿ ಜ್ಯೂಸ್ ಮಾಡಿ ಕುಡಿದರೆ ಆರೋಗ್ಯ ವೃದ್ಧಿ
ವಿವಿ ಡೆಸ್ಕ್ಃ ಬೂದುಗುಂಬಳ ಕಾಯಿ ಕೆಟ್ಟ ದೃಷ್ಟಿ ತಡೆಗೆ ಮತ್ತು ದುಷ್ಟ ಶಕ್ತಿ ತಡೆಗೆ ಜನರು ಬಳಸುತ್ತಾ ಬಂದಿದ್ದಾರೆ.
ಆದರೆ ಅದನ್ನು ಅಡುಗೆಯಲ್ಲಿ ಬಳಸುವದು ತೀರ ವಿರಳವಾಗಿದೆ ಅದನ್ನು ಸೇವಿಸುವಲ್ಲಿ ಜನರು ವಿಫಲವಾಗಿದ್ದಾರೆ ಅಂದರೆ ತಪ್ಪಿಲ್ಲ. ಬೂದುಗುಂಬಳ ಕಾಯಿಯಲ್ಲಿ ಅಪಾರ ಶಕ್ತಿ ಅಡಗಿದೆ. ಮನೆ ಮುಂದೆ, ವ್ಯಾಪಾರ ನಡೆಸುವ ಅಂಗಡಿಗಳ ಮುಂದೆ ದುಷ್ಟ ಶಕ್ತಿ ತಡೆಗೆ ಮತ್ತು ಕೆಟ್ಡ ದೃಷ್ಟಿ ತಡೆವೊಡ್ಡುವ ಶಕ್ತಿ ಇದರಲಿದೆ ಅಂದರೆ ಹೊಟ್ಟೆಗೆ ಸೇವಿಸಿದರೆ ಎನಾಗಲಿದೆ ಎಂಬುದುನವರಿಕೆ ಮಾಡಿಕೊಳ್ಳುವದು ಅಗತ್ಯವಿದೆ ಅಲ್ಲವೇ.?
ಬೂದುಗುಂಬಳಕಾಯಿ ಎಲ್ಲರಿಗೂ ಪರಿಚಿತ ತರಕಾರಿ. ಮೊದಲು ಹುಳಿ, ಪಲ್ಯ ಮತ್ತು ಸಿಹಿ ತಿಂಡಿಗಳಲ್ಲಿ ಬಳಕೆ ಮಾಡಲಾಗುತಿತ್ತು. ಈಚೆಗೆ ಇದರ ಬಳಕೆ ವಿರಳಾದಿವಿರಳವಾಗಿದೆ.
ಕೇವಲ ಮನೆ ಮುಂದೆ ಕಟ್ಟಲಿಕ್ಕೆ ಅಥವಾ ವಾಹನ, ಗೃಹ ಪ್ರವೇಶ ಸಂದರ್ಭದಲ್ಲಿ ಇದನ್ನು ಹೊಡೆಯುವ ಪದ್ಧತಿಗೆ ಸೀಮಿತಗೊಳಿಸಿದ್ದಾರೆ.
ಬೂದುಗುಂಬಳ ಕಾಯಿ ಅಥವಾ ಕುಂಬಳಕಾಯಿ ಎರಡರಲ್ಲೂ ಅಗಾಧವಾದ ಶಕ್ತಿ ಅಡಗಿದೆ. ಈ ಕಾಯಿಗಳು ಹೊಡೆದರೆ ಅಥವಾ ಮನೆ ದ್ವಾರ ಬಾಗಿಲು ಮೇಲ್ಭಾಗದಲ್ಲಿ ಜೋತು ಬಿಟ್ಟರೆ ಸುತ್ತಲಿನ ಪರಿಸರ ಪಾಸಿಟಿವ್ ಎನರ್ಜಿ ಇರಲಿದೆ ಎಂಬ ನಂಬಿಕೆ ಇದೆ ಅದರಂತೆ ವೈಜ್ಞಾನಿಕವಾಗಿಯೂ ಆ ಕಾಯಿಯಲ್ಲಿರುವ ಗುಣಗಳನ್ನು ಸಂಶೋಧಿಸಲಾಗಿದ್ದು, ಅದರಿಂದ ನೆಗೆಟಿವ್ ಎನರ್ಜಿ ಹೊಡೆದೋಡಿಸುವ ಶಕ್ತಿ ಅಡಗಿದೆ ಎನ್ನಲಾಗಿದೆ.
ಪ್ರಾಕೃತಿಕವಾಗಿ ಇಂತಹ ಕೊಡುಗೆ ಅಪಾರವಾಗಿವೆ ಅವುಗಳನ್ನು ಸಮರ್ಪಕವಾಗಿ ತಿಳಿದುಕೊಂಡು ಸದುಪಯೋಗ ಪಡೆಯಬೇಕಿದೆ ಅಲ್ಲವೇ..?ಪೌಷ್ಟಿಕಾಂಶಗಳು ಬದಲಾಯಿಸಿ ಕುಂಬಳಕಾಯಿ ರುಚಿಕರವಾದ ತರಕಾರಿ ಮಾತ್ರವಲ್ಲದೆ ಮನುಷ್ಯನಿಗೆ ಪುಷ್ಟಿಕರವಾದ ಆಹಾರಾಂಶಗಳನ್ನೂ ಒಳಗೊಂಡಿದೆ.
ನೂರುಗ್ರಾಂ ಕುಂಬಳ ಕಾಯಿಯಲ್ಲಿರುವ ಆಹಾರ ಅಂಶಗಳು ಹೀಗಿವೆಃ ತೇವಾಂಶ 92.6 ಗ್ರಾಂ; ಕಾರ್ಬೊಹೈಡ್ರೇಟ್ 4.6 ಗ್ರಾಂ; ವಿಟಮಿನ್‍ಗಳು 1.4 ಗ್ರಾಂ; ಕೊಬ್ಬು 0.1 ಗ್ರಾಂ; ಲವಣ 0.6 ಗ್ರಾಂ; ನಾರು 0.7 ಗ್ರಾಂ ಅಲ್ಲದೆ ಶಕ್ತಿ 25 ಕೆಲೋರಿಗಳು, ಮೆಗ್ನೀಸಿಯಂ 14 ಮಿಗ್ರಾಂ; ರಂಜಕ 30 ಮಿಗ್ರಾಂ; ಕಬ್ಬಿಣ 0.7 ಮಿಗ್ರಾಂ; ಸೋಡಿಯಮ್ 5.6 ಮಿಗ್ರಾಂ; ಪೊಟ್ಯಾಸಿಯಂ 139.0 ಮಿಗ್ರಾಂ; ತಾಮ್ರ 0.20 ಮಿಗ್ರಾಂ; ಗಂಧಕ 1.6 ಮಿಗ್ರಾಂ; ಕ್ಲೋರಿನ್ 4.0 ಮಿಗ್ರಾಂ; ಥಯಾಮಿನ್ 0.06 ಮಿಗ್ರಾಂ; ರಿಬೋಫ್ಲೇವಿನ್ 0.04 ಮಿಗ್ರಾಂ; ನಿಕೊಟಿನಿಕ್ ಅಮ್ಲ 0.5 ಮಿಗ್ರಾಂ; ಸಿ ವಿಟಮಿನ್ 2.0 ಮಿಗ್ರಾಂ; ಎ ವಿಟಮಿನ್ 84 ಐಯು-ಇವನ್ನು ಸಹ ವಿಶ್ಲೇಷಣೆಯಿಂದ ಶೋಧಿಸಲಾಗಿದೆ.