
ದಿನಕ್ಕೊಂದು ಕಥೆ
ಸೂರ್ಯ ತನ್ನ ತೇಜಸ್ಸು ಮರಳಿ ಪಡೆದ ದಿನವೇ ಸಂಕ್ರಾಂತಿ
ಒಮ್ಮೆ ಬ್ರಹ್ಮ ದೇವ ಹಂಸಾರೂಢನಾಗಿ ಭೂಮಿಯ ಮೇಲೆ ಸಂಚರಿಸುತ್ತಿದ್ದ. ಆಗ ಸೂರ್ಯದೇವ ತನ್ನ ತೇಜಸ್ಸಿನಿಂದ ಬ್ರಹ್ಮನನ್ನು ಸುಟ್ಟು ಹಾಕಲು ಪ್ರಯತ್ನಿಸಿದ. ಇದರಿಂದ ಕೋಪಗೊಂಡ ಬ್ರಹ್ಮ, ಸೂರ್ಯನ ತೇಜಸ್ಸನ್ನು ಕ್ಷೀಣಿಸುವಂತೆ ಶಾಪ ನೀಡಿದ. ಸೂರ್ಯನ ತೇಜಸ್ಸು ಕ್ಷೀಣಿಸಿದಾಗ ಭೂಮಿ ಕತ್ತಲೆಯಲ್ಲಿ ಮುಳುಗಿತು. ಸಸ್ಯಗಳು ಬಾಡಿ, ಪ್ರಾಣಿಗಳು ಸಂಕಷ್ಟಕ್ಕೆ ಸಿಲುಕಿದವು. ಋಷಿ-ಮುನಿಗಳಿಗೆ ತಮ್ಮ ತಪಸ್ಸು ಮಾಡಲು ಸಾಧ್ಯವಾಗಲಿಲ್ಲ. ದೇವತೆಗಳೂ ಸಹ ತಮ್ಮ ಕರ್ಮಗಳನ್ನು ನಿರ್ವಹಿಸಲು ಸಾಧ್ಯವಾಗದೆ ಕಂಗಾಲಾದರು.
ಈ ಸಮಸ್ಯೆಯನ್ನು ನಿವಾರಿಸಲು ಸೂರ್ಯದೇವ ತೀವ್ರ ತಪಸ್ಸು ಮಾಡಲು ನಿರ್ಧರಿಸಿದ. ಅವನು ಧನುರ್ಮಾಸದಲ್ಲಿ ಕಾಡಿನಲ್ಲಿ ತಪಸ್ಸು ಮಾಡಿ ವಿಷ್ಣುವಿನನ್ನು ಆರಾಧಿಸಿದ. ವಿಷ್ಣುವಿನ ಅನುಗ್ರಹದಿಂದ ಸೂರ್ಯದೇವ ತನ್ನ ತೇಜಸ್ಸನ್ನು ಮರಳಿ ಪಡೆದು ಮತ್ತೆ ಭೂಮಿ ಪ್ರಕಾಶಮಾನವಾಗಿ ಮಾಡಿದ. ಈ ದಿನವನ್ನು ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ.
ಸೂರ್ಯನು ವಿಷ್ಣುವನ್ನು ಆರಾಧಿಸಿ ತನ್ನ ಸಮಸ್ಯೆಯನ್ನು ನಿವಾರಿಸಿಕೊಂಡ ಕಾರಣ ಧನುರ್ಮಾಸದಲ್ಲಿ ವಿಷ್ಣುವಿನ ಪೂಜೆ ಮಾಡುವುದರಿಂದ ಸಕಲ ಸಂಕಷ್ಟಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ನಮ್ಮವರಲ್ಲಿದೆ.
ನೀತಿ :– ಅಹಂಕಾರ ತೊರೆದು, ದೇವರ ಭಜಿಸಿ. ತಪಸ್ಸಿನ ಶಕ್ತಿ ಅಪಾರ. ವಿಷ್ಣುವಿನಂತಹ ದೈವಿಕ ಶಕ್ತಿಯು ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗುತ್ತದೆ. ಸೂರ್ಯ ಮತ್ತು ವಿಷ್ಣುನನ್ನು ಆರಾಧಿಸುವ ಮೂಲಕ ಆಧ್ಯಾತ್ಮಿಕ ಪ್ರಗತಿ ಸಾಧಿಸಬಹುದು.
🖊️ಸಂಗ್ರಹ🖋️
*ಡಾ.ಈಶ್ವರಾನಂದ ಸ್ವಾಮೀಜಿ.*
📞 – 9341137882.