ನ.27 ರಂದು ವಾಯುಭಾರ ಮತ್ತಷ್ಟು ತೀವ್ರ
ಮಳೆಗಾಲ ಮುಗಿದಿಲ್ಲ..? ಮತ್ತೆ ಮಳೆ ಅಬ್ಬರ ಮುನ್ಸೂಚನೆ
ಬೆಂಗಳೂರಃ ಇಂದಿನಿಂದ ಮುಂದಿನ 24 ಗಂಟೆಯಲ್ಲಿ ವಾಯುಭಾರ ಕುಸಿತ ತೀವ್ರಗೊಳ್ಳಲಿರುವ ಹಿನ್ನೆಲೆ ನವೆಂಬರ್ 27 ರಂದು ಸಂಜೆ ಹೊತ್ತಿಗೆ ಸ್ಪಷ್ಟ ಚಂಡಮಾರುತ ಪರಿಚಲನೆ ಆಗಿ ಬದಲಾಗಲಿದೆ. ಆಗ ಗಾಳಿಯ ವೇಗವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಒಟ್ಟಾರೆ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಹವಾಮಾನ ವೈಪರಿತ್ಯಗಳ ಪ್ರಭಾವದಿಂದಾಗಿ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಲ್ಲಿ ಡಿಸೆಂಬರ್ 4 ರವರೆಗೆ ಮಳೆ ಅಬ್ಬರ ಜೋರಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹಾಗಾದರೆ ಯಾವ ಜಿಲ್ಲೆಗಳಿಗೆ ಮಳೆ ಬರಲಿದೆ ಎಂಬ ಮಾಹಿತಿ ಇಲ್ಲಿದೆ.
ಮುಂದಿನ 24 ಗಂಟೆಗಳ ಕಾಲ ರಾಜ್ಯದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ. ಕೆಲವು ಪ್ರದೇಶಗಳಲ್ಲಿ ಮಬ್ಬು ವಾತಾವರಣ ಕಂಡು ಬಂದು ಚಳಿಯ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಹೆಚ್ಚಿದೆ.
ಮುಂದಿನ 48 ಗಂಟೆಗಳ ಕಾಲ ಅಂದರೆ ಮುಂದಿನ ಎರಡು ದಿನ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಜೊತೆಗೆ ಚಳಿ ಉಂಟಾಗಲಿದ್ದು, ತಾಪಮಾನ ಗರಿಷ್ಠ 28 ಮತ್ತು ಕನಿಷ್ಟ 19 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.