ಪ್ರಮುಖ ಸುದ್ದಿ
BREAKING NEWS ಮಗನಿಗೆ ಕ್ಷೇತ್ರ ಬಿಟ್ಟು ಕೊಟ್ಟ ಯಡಿಯೂರಪ್ಪ
ಶಿಖಾಪುರ ಕ್ಷೇತ್ರದಿಂದ ಬಿವೈ ವಿಜಯೇಂದ್ರ ಸ್ಪರ್ಧೆ - ಯಡಿಯೂರಪ್ಪ ಘೋಷಣೆ
ಮಗನಿಗೆ ಕ್ಷೇತ್ರ ಬಿಟ್ಟು ಕೊಟ್ಟ ಯಡಿಯೂರಪ್ಪ
ಶಿಖಾಪುರ ಕ್ಷೇತ್ರದಿಂದ ಬಿವೈ ವಿಜಯೇಂದ್ರ ಸ್ಪರ್ಧೆ – ಯಡಿಯೂರಪ್ಪ ಘೋಷಣೆ
ವಿವಿ ಡೆಸ್ಕ್ಃ ಈ ಬಾರಿ ಶಿಕಾರಿಪುರ ಕ್ಷೇತ್ರವನ್ನು ನನ್ನ ಮಗ ವಿಜಯೇಂದ್ರನಿಗೆ ಬಿಟ್ಟುಕೊಡಲು ನಿರ್ಧರಿಸಿದ್ದೇನೆ. ನನ್ನ ಅನುಪಸ್ಥಿತಿಯಲ್ಲಿ ಕ್ಷೇತ್ರದ ಕೆಲಸ ಕಾರ್ಯಗಳನ್ನು ವಿಜಯೇಂದ್ರ ನಿಭಾಯಿಸಿದ್ದಾರೆ. ಹೀಗಾಗಿ ಶಿಕಾರಿಪುರ ಕ್ಷೇತ್ರದಿಂದ ಈ ಬಾರಿ ವಿಜಯೇಂದ್ರನೇ ಹುರಿಯಾಳು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.
ಮಾಧ್ಯಮ ಜೊತೆಗೆ ಮಾತನಾಡುವಾಗ, ಯಡಿಯೂರಪ್ಪ ನವರು ತಮ್ಮ ಮಗ ವಿಜಯೇಂದ್ರನವರನ್ನು ಶಿಕಾರಿಪುರ ವಿಧಾನಸಭೆ ಕ್ಷೇತ್ರಕ್ಕೆ ಕಣಕ್ಕಿಳಿಯಲಿದ್ದಾರೆಂದು ಘೋಷಿಸಿದರು. ಕ್ಷೇತ್ರದ ಜನರಲ್ಲೂ ಮಗನನ್ನು ತಮಗಿಂತ ಹೆಚ್ಚಿನ ಮತಗಳಿಂದ ಗೆಲ್ಲಿಸುವಂತೆ ಮನವಿ ಮಾಡಿದರು.