ಕುರಿ ಹಿಂಡಿನಂತೆ ಸಿಟಿಗೆ ಬಂದ ಬುದ್ಧಿಗೇಡಿ ಜನ, ಎದ್ನೋ ಬಿದ್ನೋ ಅಂತ ಓಡಿದ್ಯಾಕೆ.?
ಕುರಿ ಹಿಂಡಿನಂತೆ ಸಿಟಿಗೆ ಬಂದ ಜನ, ಪೊಲೀಸರ ಕೈಗೆ ತಗಲಾಕೊಂಡ್ರು, ಎದ್ನೋ ಬಿದ್ನೋ ಅಂತ ಓಡಿದ್ಯಾಕೆ.?
ಯಾದಗಿರಿಃ ಗ್ರಾಮೀಣ ಭಾಗದಿಂದ ನಗರದಲ್ಲಿ ನಡೆಯುವ ಮದುವೆಗೆಂದು ಗೂಡ್ಸ್ ವಾಹನವೊಂದರಲ್ಲಿ ಕುಂರಿ ಹಿಂಡಿನಂತೆ ಕುಳಿತು ಬಂದಿದ್ದ ಜನರು ಪೊಲೀಸರ ಕೈಗೆ ತಗಲಾಕೊಂಡ್ರು.
ಕೊರೊನಾ ನಿಯಮಗಳನ್ನು ಮೀರಿ ಮಾಸ್ಕ್ ಹಾಕಿಕೊಳ್ಳದೆ ಒಬ್ಬರ ಮೇಲೊಬ್ಬರು ಕುಳಿತು ಸಿಟಿಗೆ ಮದುವೆಗೆಂದು ಹೊರಟಿದ್ದ ವಾಹನ ತಡೆದು ಪೊಲೀಸರು ಸೀದಾ ಠಾಣೆಗೆ ಕರೆ ತಂದಿದ್ದಾರೆ. ಠಾಣೆ ಆವರಣದಲ್ಲಿ ವಾಹನ ನಿಲ್ಲುತ್ತಿದ್ದಂತೆ ಎದ್ನೋ ಬಿದ್ನೋ ಎಂದು ಜನ ಠಾಣೆಯ ತಂತಿ ಬೇಲಿ ಜಿಗಿದು ಪರಾರಿಯಾಗಿದ್ದಾರೆ.
ಪೊಲೀಸರಿಂದ ಇಂದು ತಪ್ಪಿಸಿಕೊಳ್ಳಬಹುದಿ ಆದರೆ ಕೊರೊನಾ ಹೆಮ್ಮಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಜನ ಎಂದು ಮನಗಾಣುವರೋ ಕಾಣದು.
ಇಷ್ಟೆಲ್ಲ ಅವತರ ಸಾವು ನೋವು ಟಿವಿ,ಮಾಧ್ಯಮ ಪತ್ರಿಕೆಯಲ್ಲಿ ಓದಿಯು ಮತ್ತೆ ಈ ರೀತಿ ಕುರಿ ಮಂದೆ ಬಂದಂತೆ ಕುಳಿತು ಬರುತ್ತಾರೆ ಅಂದ್ರೆ ಇಂತವರಿಗಾಗಿ ಸರ್ಕಾರ ಸಾವಿರಾರು ಕೋಟಿ ಖರ್ಚು ಮಾಡಬೇಕಾ..?
ರಾತ್ರಿ ಹಗಲು ತಮ್ಮ ಜೀವನ ಪಣಕ್ಕಿಟ್ಟು ಪೊಲಿಸರು ಮತ್ತು ವೈದ್ಯಕೀಯ ಸಿಬ್ಬಂದಿ, ಸರ್ಕಾರದ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ದುಡಿಬೇಕಾ.? ಇವರಿಗೇನಾ.. ಬೆಡ್ ಸಿಗ್ತಲ್ಲಾ..ಆಕ್ಸಿಜನ್ ಇಲ್ಲಾ ನಾವೆಲ್ಲ ಪರದಾಟ ಮಾಡೋದು ಸರ್ಕಾರವನ್ನಾ ಬೈಯ್ಯೋದು ಇಂತವರಿಗಾಗಿನಾ ಎನ್ನುವಂತಾಗಿದೆ.
ಈ ಜನಕ್ಕೆ ಎಂದು ಬುದ್ಧಿ ಬರುತ್ತೋ ಎಂದು ಪೊಲೀಸರು ಸೇರಿದಂತೆ ಮಾಧ್ಯಮದವರು ಹಣೆಹಣೆ ಬಡೆದುಕೊಂಡ ಸ್ಥಿತಿ ನಿರ್ಮಾಣವಾಗಿತ್ತು.