ಪ್ರಮುಖ ಸುದ್ದಿ
CBSE 10ನೇ ತರಗತಿ ಫಲಿತಾಂಶ ಪ್ರಕಟ
ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) 10 ನೇ ತರಗತಿ ಫಲಿತಾಂಶಗಳನ್ನು ಇಂದು ಪ್ರಕಟಿಸಿದೆ.
ಫಲಿತಾಂಶಗಳನ್ನು https://cbseresults.nic.in/ ಮತ್ತು DigiLocker ಸೇರಿದಂತೆ ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಪರಿಶೀಲಿಸಬಹುದಾಗಿದೆ.
ಫೆಬ್ರವರಿ 15ರಿಂದ ಮಾರ್ಚ್ 13, 2024 ರವರೆಗೆ ನಡೆದ 10ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಕಳೆದ ವರ್ಷದಂತೆ ಈ ಬಾರಿಯೂ 10ನೇ ತರಗತಿಯ ಫಲಿತಾಂಶಗಳಲ್ಲಿ ತಿರುವನಂತಪುರವು ಅತ್ಯುತ್ತಮ ಪ್ರದರ್ಶನ ನೀಡಿದ ಜಿಲ್ಲೆಯಾಗಿ ಹೊರಹೊಮ್ಮಿದೆ.
ತಿರುವನಂತಪುರ: 99.75 ವಿಜಯವಾಡ: 99.6 ಚೆನ್ನೈ: 99.3 ಬೆಂಗಳೂರು: 99.26 ಅಜ್ಮೀರ್: 97.1 ಪುಣೆ: 96.46 ದೆಹಲಿ ಪೂರ್ವ: 94.45 ದೆಹಲಿ ಪಶ್ಚಿಮ: 94.18 ಚಂಡೀಗಢ: 94.14 ಪಾಟ್ನಾ: 92.91