ಕ್ಯಾಂಪಸ್ ಕಲರವಪ್ರಮುಖ ಸುದ್ದಿ
ಚಂದಿರನಂಗಳಕ್ಕೆ ರೀಚಾದ ಚಂದ್ರಯಾನ-2
(ಸಾಂದರ್ಭಿಕ ಚಿತ್ರ)
ನವದೆಹಲಿ: ಚಂದ್ರಯಾನ-2 ನೌಕೆ ಮಂಗಳವಾರ ಬೆಳಿಗ್ಗೆ ಮತ್ತಷ್ಟು ಚಂದ್ರನ ಸನಿಹಕ್ಕೆ ಸಾಗಿದೆ. ಆ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆ ಚಂದ್ರಯಾನ ಯೋಜನೆಯಲ್ಲಿ ಮಹತ್ವದ ಮೈಲುಗಲ್ಲು ಸಾಧಿಸಿದೆ. 30 ದಿನಗಳ ಬಳಿಕ ಚಂದ್ರಯಾನ-2 ನೌಕೆ ಭೂಮಿಯ ಕಕ್ಷೆಯಿಂದ ಚಂದ್ರನ ಕಕ್ಷೆಗೆ ಸೇರುವ ಕಾರ್ಯ ಇಂದು ಬೆಳಿಗ್ಗೆ 9:02ಕ್ಕೆ ಯಶಸ್ವಿಯಾಗಿ ನಡೆದಿದೆ ಎಂದು ಇಸ್ರೋ ಮೂಲಗಳಿಂದ ತಿಳಿದು ಬಂದಿದೆ. ವಿಕ್ರಮ್ ಲ್ಯಾಂಡರ್ ಸೆಪ್ಟಂಬರ್ 2ರಂದು ನೌಕೆಯಿಂದ ಬೇರ್ಪಟ್ಟು ಸೆಪ್ಟಂಬರ್ 7ರಂದು ಚಂದ್ರನ ಅಂಗಳಕ್ಕೆ ಪಾದಾರ್ಪಣೆ ಮಾಡಲಿದೆ.