ಪ್ರಮುಖ ಸುದ್ದಿ
ಸಿಎಂ ಬೊಮ್ಮಾಯಿ ಪೂರ್ಣಾವಧಿ ಪೂರೈಸಲಿ ಕಾಂಗ್ರೆಸ್ ಸಹಕಾರವಿದೆ – ಯು.ಟಿ.ಖಾದರ್
ಸಿಎಂ ಬೊಮ್ಮಾಯಿ ಪೂರ್ಣಾವಧಿ ಪೂರೈಸಲಿ ಕಾಂಗ್ರೆಸ್ ಸಹಕಾರವಿದೆ – ಯು.ಟಿ.ಖಾದರ್
ಕಲ್ಬುರ್ಗಿಃ ಸಿಎಂ ಬೊಮ್ಮಾಯಿ ಅವರು ಪೂರ್ಣಾವಧಿ ಮುಗಿಸಲು ಕಾಂಗ್ರೆಸ್ ಸಹಕಾರ ನೀಡಲಿದೆ ಎಂದು ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಯು.ಟಿ.ಖಾದರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಆಗಿ ಬೊಮ್ಮಾಯಿಯವರು ಪೂರ್ಣಾವಧಿ ಮುಗಿಸಲು ನಾವು ಸಹಕಾರ ನೀಡಲಿದ್ದೇವೆ. ಆದರೆ ಅವರೇ ಪಕ್ಷದ ಶಾಸಕರು, ನಾಯಕರು ಅಲ್ಲಿನ ಬಣಗಳು ಬಿಡಬೇಕಲ್ಲ. ಹೀಗಾಗಿ ಅವರು ಪೂರ್ಣಾವಧಿ ಮುಗಿಸುತ್ತಾರೆ ಎಂಬುದು ನಮಗೆ ಡೌಟ್ ಇದೆ.
ಅವರದೇ ಪಕ್ಷದವರು ಅವರನ್ನು ಆಡಳಿತ ನಡೆಸಲು ಬಿಡುವದಿಲ್ಲ. ಶೀಘ್ರದಲ್ಲಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸ್ಥಿತಿ ಬಂದರೂ ಬರಬಹುದು ಎಂದು ಭವಿಷ್ಯ ನುಡಿದರು.