ಪ್ರಮುಖ ಸುದ್ದಿ
ಗಡಿಭಾಗದಲ್ಲಿ ರ್ಯಾಂಡಮ್ ಟೆಸ್ಟ್ ಕಡ್ಡಾಯ – ಬೊಮ್ಮಾಯಿ ಸೂಚನೆ
ಗಡಿಭಾಗದಲ್ಲಿ ರ್ಯಾಂಡಮ್ ಟೆಸ್ಟ್ ಕಡ್ಡಾಯ – ಬೊಮ್ಮಾಯಿ ಸೂಚನೆ
ಬೆಂಗಳೂರಃ ಅನ್ ಲಾಕ್ ಬಳಿಕ ಮೂರನೇಯ ಅಲೆ ಭೀತಿ ಜಾಸ್ತಿಯಾಗಿದ್ದು, ಜಾತ್ರೆ, ಉತ್ಸವ, ಮದುವೆ, ಯಾತ್ರಾ ಸ್ಥಳ್ಳು ಸೇರಿದಂತೆ ಸಂತೆಗಳಲ್ಲಿ ಜನವೋ ಜನ ಸೇರುತ್ತಿದ್ದು ಯಾವುದೇ ಕೊರೊನಾ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ.
ಹೀಗಾಗಿ ಕೊರೊನಾ ಪ್ರಕರಣಗಳು ದಿನೆ ದಿನೇ ಜಾಸ್ತಿಯಾಗುತ್ತಿದ್ದು, ಶೀಘ್ರದಲ್ಲೇ 3 ನೇ ಅಲೆ ಅಪ್ಪಳಿಸಲಿದೆ ಎಂಬ ಆತಂಕ ಶುರುವಾಗಿದ್ದು, ರಾಜ್ಯ ಸರ್ಕಾರ ಅದಕ್ಕೆ ಬೇಕಾದ ತಯಾರಿ ನಡೆಸುತ್ತಿದೆ.
ಅಲ್ಲದೆ ಮಹಾರಾಷ್ಟ್ರ ಮತ್ತು ಕೇರಳ ಗಡಿ ಭಾಗದಿಂದ ಕರ್ನಾಟಕಕ್ಕೆ ಬರುವ ಜನರನ್ನು ರ್ಯಾಂಡಮ್ ಟೆಸ್ಟ್‌ಗೆ ಒಳಪಡಿಸಬೇಕೆಂದು ಸಚಿವ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಗಡಿ ಭಾಗದಲ್ಲಿ ಕಡ್ಡಾಯವಾಗಿ ರ್ಯಾಂಡಮ್ ಟೆಸ್ಟ್ ನಡೆಸಲಾಗುತ್ತಿದ್ದು, ಪಾಸಿಟಿವ್ ಬಂದವರನ್ನು ನೇರವಾಗಿ ಕೊರೊನಾ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ನೆಗೆಟಿವ್ ಇದ್ದರೆ ಮಾತ್ರ ಕರ್ನಾಟಕ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.