ಬಾಂಬೆ ಮಿಠಾಯಿ ಮಾರಾಟಕ್ಕೆ ನಿಷೇಧ..?
ರಾಜ್ಯದಲ್ಲಿ ಕಾಟನ್ ಕ್ಯಾಂಡಿ ಮಾರಾಟ ಬಂದ್ ಃ ಚಿಂತನೆ
ಬಾಂಬೆ ಮಿಠಾಯಿ ಮಾರಾಟಕ್ಕೆ ನಿಷೇಧ..?
ರಾಜ್ಯದಲ್ಲಿ ಕಾಟನ್ ಕ್ಯಾಂಡಿ ಬಂದ್ ಚಿಂತನೆ
ವಿವಿ ಡೆಸ್ಕ್ಃ ಬಾಂಬೆ ಮಿಠಾಯಿ ಬಾಂಬೆ ಮಿಠಾಯಿ ಅಂಥ ಮಾರಾಟಗಾರದ ಧ್ವನಿ ಕೇಳಿದರೆ ಸಾಕು ಮಕ್ಕಳ ಕಿವಿ ನಿಮಿರಿಸಿ ಓಡುತ್ತಾ ಅದನ್ನು ತಂದು ತಿನ್ನುವ ಖುಷಿಯೇ ಬೇರೆ ಇತ್ತು.
ಪಿಂಕ್ ಕಲರ್ ನ ಈ ಬಾಂಬೆ ಮಿಠಾಯಿ (cotten candy) ಮಕ್ಕಳ ಆಕರ್ಷಣೆ ಮಾಡುವಲ್ಲಿ ಮುಂದಿತ್ತು.
ಇದೀಗ ಇಂತಹ ಬಾಂಬೆ ಮಿಠಾಯಿ (ಕಾಟನ್ ಕ್ಯಾಂಡಿ) ಯಲ್ಲಿ ಕ್ಯಾನ್ಸರ್ ಕಾರಕ ಅಂಶ ಇರುವ ಕುರಿತು ತಮಿಳುನಾಡು ಮತ್ತು ಪುದುಚರಿಯಲ್ಲಿ ಸಂಶೋಧನೆ ಮೂಲಕ ಪತ್ತೆ ಮಾಡಲಾಗಿದ್ದು, ಈಗಾಗಲೇ ತಮಿಳುನಾಡು ಮತ್ತು ಪುದುಚರಿ ರಾಜ್ಯಗಳಲ್ಲಿ ಈ ಬಾಂಬೆ ಮಿಠಾಯಿ (cotten candy) ಮಾರಾಟ ನಿಷೇಧಿ ಆದೇಶಿಸಲಾಗಿದೆ.
ಆ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಈಗಾಗಲೇ ಕಾಟನ್ ಕ್ಯಾಂಡಿ ನಿಷೇಧಿಸುವ ಕುರಿತು ಮಹತ್ವದ ಚಿಂತನೆ ನಡೆಸಲಾಗುತ್ತಿದೆ.
ಈ ಬಾಂಬೆ ಮಿಠಾಯಿ ಅಥವಾ ಕಾಟನ್ ಕ್ಯಾಂಡಿ ಮಕ್ಕಳು ಸೇರಿದಂತೆ ಮಹಿಳೆಯರಿಗೂ ಇಷ್ಟವಾದ ಮಿಠಾಯಿ ಇದಾಗಿದ್ದು, ಪಿಂಕ್ ಬಣ್ಣದ ಈ ಮಿಠಾಯಿ ಹುಬ್ಬು ಹುಬ್ಬು ಇರುವಂತೆ ಬಾಯಿಗೆ ಇಟ್ಟುಕೊಳ್ಳುತ್ತಿದ್ದಂತೆ ಕರಗಿ ಹೋಗಿ ಸಿಹಿ ಸಿಹಿಯಾದ ಆಹ್ಲಾದ ನೀಡುವ ಈ ಮಿಠಾಯಿಯಲ್ಲಿ ಕ್ಯಾನ್ಸರ್ ಕಾರಮ ಅಂಶ ಪತ್ತೆಯಾಗಿದೆ.
ಪಿಂಕ್ ಬಣ್ಣ ಹಾಕುವ ಆ ದ್ರವದಲ್ಲಿಯೇ ಕ್ಯಾನ್ಸರ್ ಅಂಶ ಪತ್ತೆಯಾಗಿದೆ. ಹೀಗಾಗಿ ಕರ್ನಾಟಕದಲ್ಲೂ ಕಾಟನ್ ಕ್ಯಾಂಡಿ ಬ್ಯಾನ್ ಮಾಡುವ ನಿರೀಕ್ಷೆ ಇದೆ .