COVID-19 ಐದು ರೂಪಾಂತರಿಗಳ ಕಾಟ, ಕೇಂದ್ರ ಆರೋಗ್ಯ ಸಚಿವಾಲಯ ಕಳವಳ
COVID-19 ಐದು ರೂಪಾಂತರಿಗಳ ಕಾಟ, ಕೇಂದ್ರ ಆರೋಗ್ಯ ಸಚಿವಾಲಯ ಕಳವಳ
ನವದೆಹಲಿಃ ಕೇಂದ್ರ ಸರ್ಕಾರ ಕೊರೊನಾ ರೂಪಾಂತರಿ ಕುರಿತು ಕಣ್ಗಾವಲು ಮಾಡುತ್ತಿದೆ. ಒಂದಡೆ ರೂಪಾಂತರ ಮೇಲ್ವಿಚಾರಣೆ ಮಾಡುತ್ತಿದ್ದು, ಇನ್ನೊಂದಡೆ ದೇಶದೊಳಗೆ ಹೊರಗಿನಿಂದ ಬರುವ ಡೆಲ್ಟಾ ರೂಪಾಂತರದ ಪರಿಣಾಮ ಕುರಿತು ಮೇಲ್ವಿಚಾರಣೆ ಮಾಡುವ ಕೈಂಕರ್ಯವನ್ನು ತೊಟ್ಟಿದೆ ಕಾರ್ಯಚರಣೆ ಮುಂದುವರೆದಿದೆ ಎಂದು ಕೇಂದ್ರದ ಆರೋಗ್ಯ ಸಚಿವಾಲಯ ತಿಳಿಸಿದೆ.

ಆಲ್ಫಾ, ಬೀಟಾ, ಗಾಮಾ ಮತ್ತು ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್ ಈ ಐದು ಕೋವಿಡ್ ರೂಪಾಂತರಿ ಕುರಿತು ತಜ್ಞರು ಹೆಸರಿಸಿದ್ದು, ಇವುಗಳ ಬಗ್ಗೆ ಸಮಗ್ರ ಅಧ್ಯಯನ ನಡೆಯುತ್ತಿದೆ. ಈ ಕುರಿತು ಕಳವಳ ವ್ಯಕ್ತಪಡಿಸಿದ ಕೇಂದ್ರ ಸರ್ಕಾರ, ಇವುಗಳ ಹರಡುವಿಕೆ ತಡೆ ಸವಾಲಾಗಿದ್ದು, ಜನರ ಸಹಕಾರ ತಿಳುವಳಿಕೆಯೇ ಇಲ್ಲ ಬಹು ಮುಖ್ಯವಾಗಿದೆ.
ಸರ್ಕಾರ ಎಷ್ಟೇ ನಿಯಮಗಳನ್ನು ಮುಂಜಾಗೃತವಾಗಿ ಜಾರಿಗೊಳಿಸಿದರೂ ಜನ ಕ್ಯಾರೆ ಅಂತಿಲ್ಲ. ತೊಂದರೆಯಾದಾಗ ಸರ್ಕಾರದ ವಿರುದ್ಧ ಹರಿಹಾಯವುದು ಬಿಡಲ್ಲ ಎಂಬ ಸ್ಥಿತಿ ಬಂದೊದಗಿದೆ.
ಕೈ ಬಿಟ್ರೆ ಇಡಿ ದೇಶದ ಜನ ತೀವ್ರ ಸಂಕಷ್ಟದ ಬಲೆಯಲಿ ಸಿಲುಕಿ ನರಳಬೇಕಾಗುತ್ತದೆ. ಸಾಕಷ್ಟು ಮಾರ್ಗಸೂಚಿ ಬಿಡುಗಡೆಗೊಳಿಸಿದರೂ ಜಾಗೃತಿ ಮೂಡಿಸಿದರೂ ಜನ ಕೇಳುತ್ತಿಲ್ಲ. ಮುಂಜಾಗೃತೆ ಎಚ್ಚರಿಕೆವಹಿಸುವ ಅಗತ್ಯವಿದೆ. ಜೀವದ ಜೊತೆ ಚಲ್ಲಾಟವಾಡುವದಲ್ಲ ಎಂಬ ಮಾತನ್ನು ಸರ್ಕಾರ ಕಾಳಜೀಪೂರ್ವಕವಾಗಿ ಹೇಳಿದೆ.
ನಾವು ಹೊಸ ರೂಪಾಂತರಿಯನ್ನು ಹುಡುಕಬೇಕಿದೆ. ಯಾಕಂದ್ರೆ ಅದು ಯಾವುದೇ ಸಮಯದಲ್ಲಿ ಎಲ್ಲಿ ಬೇಕಾದರೂ ತಲುಪಬಹುದು ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ಡಾ.ಎಸ್.ಕೆ.ಸಿಂಗ್ ತಿಳಿಸಿದ್ದಾರೆ.
ಸೆಂಟಿನೆಲ್ ಸೈಟ್ ಗಳನ್ನು ಗುರುತಿಸಬೇಕಿದೆ. ಮತ್ತು ಪ್ರತಿ ರಾಜ್ಯದ ಪ್ರತಿಯೊಂದು ಜಿಲ್ಲೆಯ ಪ್ರಾತಿನಿಧಿಕ ಮಾದರಿಗಳನ್ನು ಜೀನೋಮ್ ಅನುಕ್ರಮಣಿಕೆಗೆ ಒಳಪಡಿಸಬೇಕು ಎಂಬ ಕಾರ್ಯತಂತ್ರವನ್ನು ಡಬ್ಲೂಎಚ್ಓ ಹೊರ ತಂದಿದೆ ಎಂದು ವಿವರಿಸಿದರು.