ಶಹಾಪುರಃ ಯುವಕನೋರ್ವ ಸಂಶಯಾಸ್ಪದ ಸಾವು
ಶಹಾಪುರಃ ಯುವಕನೋರ್ವ ಸಂಶಯಾಸ್ಪದ ಸಾವು
Yadgiri, ಶಹಾಪುರಃ ನಗರದ ದಿಗ್ಗಿ ಬೇಸ್ ರಸ್ತೆ ಭಾಗದಲ್ಲಿ ಬರುವ ಜೀವೇಶ್ವರ ಗುಡಿ ಹತ್ತಿರ ಮನೆ ಮೇಲೆ ಕಿಟಕಿಯೊಂದಕ್ಕೆ ನೇಣು ಬಿಗಿದ ರೀತಿಯಲ್ಲಿ ಯುವಜ ಸಾವನ್ನಪ್ಪಿದ ಘಟನೆ ನಡೆದಿದೆ.
ಮಂಗಳವಾರ ತಡ ರಾತ್ರಿಯಲ್ಲಿ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು ಬುಧವಾರ ಬೆಳಗಿನ ಜಾವ ಯುವಕ ಕಿಟಿಗೆಯೊಂದಕ್ಕೆ ನೇಣು ಬಿಗಿದುಕೊಂಡ ರೀತಿಯಲ್ಲಿ ದೃಶ್ಯ ಕಂಡು ಕುಟುಂಬಸ್ಥರ ರೋಧನೆ ಶುರುವಾಗಿದೆ.
ಭೀಮರಾಯ(22) ಎಂಬ ಯುವಕನೇ ಸಾವಿಗೀಡಾಗಿರುವದು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನೆ ಕುರಿತು ತನಿಕೆ ಕೈಗೊಂಡ ಪೊಲೀಸರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವಕನ ಸಾವು ಕುರಿತು ಹಲವಾರು ಚರ್ಚೆಗಳು ನಡೆದಿದ್ದು, ಕೊಲೆ ಶಂಕೆ ಕೂಡ ವ್ಯಕ್ತವಾಗಿದೆ. ಘಟನೆ ಕುರಿತು ಪೊಲೀಸರ ತನಿಖೆ ನಂತರವೇ ಸತ್ಯಾಸತ್ಯತೆ ತಿಳಿದು ಬರಲಿದೆ ಎನ್ನಲಾಗಿದೆ.
ಕಣ್ಣೀರಿನಲ್ಲಿ ಬಡ ಕುಟುಂಬಃ ಮನೆಯಲ್ಲಿ ಬಡಾವಣೆ ಜನರಲ್ಲಿ ಉತ್ತಮ ಬಾಂಧವ್ಯ ಹೊಂದಿದ ಯುವಕನ ಸಾವು ಬರಸಿಡಿಲಿನಂತಾಗಿದೆ. ತಂದೆ ಸಾಯಬಣ್ಣನ ಜೊತೆ ನಿತ್ಯ ಕೆಲಸಕ್ಕೆ ಹೋಗುವ ಈತ, ಗೋಡೆ ಕಟ್ಟಡ, ಬುನಾದಿ ಅಗೆಯುವದು ಸೇರಿದಂತೆ ಶ್ರಮ ಜೀವಿಯಾಗಿದ್ದ ಎನ್ನಲಾಗಿದೆ.
ಆದರೆ ಈ ಯುವಕನ ದುರಂತ ಸಾವು ಎಕೆ ನಡೆಯಿತು ಹೇಗೆ.? ಎಂಬುದೇ ಪ್ರಶ್ನಾರ್ಥಕವಾಗಿದೆ ಎನ್ನಲಾಗಿದೆ.