Home

ಯುವಕನ‌ ಕೊಲೆ ಪ್ರಕರಣಃ ತನಿಖೆಯಲ್ಲಿ ಬಯಲಾದ ಸತ್ಯ– ಎಸ್ಪಿ ಡಾ.ವೇದಮೂರ್ತಿ

ತನಿಖೆಯಿಂದ ಕೊಲೆಗಡುಕರ ಪತ್ತೆ – ಎಸ್ಪಿ ಡಾ.ವೇದಮೂರ್ತಿ

 ಮಂಪರು ಪರೀಕ್ಷೆಯಿಂದ‌ ಪ್ರಕರಣ ಬೇಧಿಸಿದ ಪೊಲೀಸರು

yadgiri, ಶಹಾಪುರಃ ಮಗಳನ್ನು ಪ್ರೀತಿಸಿದ ಕಾರಣಕ್ಕಾಗಿ ಯುವಕನನ್ನು ಕೊಲೆಗೈದ ಘಟನೆ ತಾಲೂಕಿನ ದರ್ಶನಾಪುರ ಗ್ರಾಮದಲ್ಲಿ ಕಳೆದ ವರ್ಷ 21 ಜನೇವರಿ 2021 ರಂದು ನಡೆದಿತ್ತು. ಈ ಪ್ರಕರಣ ಕುರಿತು ಸಮಗ್ರ ತನಿಖೆ ನಡೆಸಲಾಗಿ‌ ಆರೋಪಿತರು ಸಂಚು ರೂಪಿಸಿ ಕೊಲೆಗೈದಿರುವದು ಆರೋಪಿತರಲ್ಲಿ‌ ಒಬ್ಬನಾಗಿದ್ದ‌ ಅಶೋಕ ಎಂಬಾತನಿಗೆ ಮಂಪರು ಪರೀಕ್ಷೆ ನಡೆಸಲಾಗಿ ಕೊಲೆ ಸಂಚು ರೂಪಿಸಿರುವದು ದೃಢಪಟ್ಟಿದೆ ಎಂದು ಎಸ್ಪಿ ಡಾ.ವೇದಮೂರ್ತಿ ತಿಳಿಸಿದರು.

ನಗರದ ವೃತ್ತ ಪೊಲೀಸ್ ಠಾಣೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೊಲೆ ಪ್ರಕರಣ ಕುರಿತು ಮಾಹಿತಿ ನೀಡಿದರು.

ಅಶೋಕ ಬಂಗಾರಿ ಎಂಬಾತನನ್ನು‌ ಮಂಪರು ಪರೀಕ್ಷೆಗೆ ಒಳಪಡಿಸಲಾಗಿ ಪ್ರಕರಣದ ಸತ್ಯಾಂಶ ಹೊರ ಬಂದಿದೆ ಎಂದ ಅವರು, ಪ್ರಕರಣದಡಿ ಈತನನ್ನೆ ಸಾಕ್ಷಿದಾರರನ್ನಾಗಿ ಮಾಡಲಾಗಿದೆ ಎಂದು ವಿವರಿಸಿದರು.

ದರ್ಶನಾಪುರ ಗ್ರಾಮದ ಶಾಲಾ ಕಂಪೌಂಡ್ ‌ಬಳಿ ಗಿಡವೊಂದಕ್ಕೆ ಮಂಜುನಾಥ ತಂದೆ ಮಲ್ಲಪ್ಪ ಪೂಜಾರಿ (18) ಎಂಬಾತನನ್ನು ನೇಣು ಬಿಗಿದ ರೀತಿಯಲ್ಲಿ ಹಾಕಲಾಗಿತ್ತು. ಈ ಕುರಿತು ಮೃತ ಯುವಕನ ತಂದೆ ಗೋಗಿ ಠಾಣೆಗೆ ದೂರು ಸಲ್ಲಿಸಿದ್ದರು.

ಯುವಕ ಅದೇ ಗ್ರಾಮದ ಯುವತಿ ಯೋರ್ವಳನ್ನು ಪ್ರೀತಿಸುತ್ತಿದ್ದ ಕಾರಣ,  ಯುವತಿಯ ತಂದೆ ಸೇರಿದಂತೆ ಇತರೆ ಮೂವರು ಸೇರಿ ಈ ಕೃತ್ಯ ಎಸಗಿರುವದು ತನಿಖಾ ವೇಳೆ ತಿಳಿದು ಬಂದಿದೆ.

ಅಂದು ಸಿಆರ್‍ಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಇದೀಗ ಸಮಗ್ರ ತನಿಖೆ ನಂತರ ಆರೋಪಿತರು ಕೊಲೆ ಸಂಚಿನಲ್ಲಿ ಭಾಗಿಯಾಗಿರುವದು ದೃಢಪಟ್ಟಿದ್ದು,  ಒಂದು ವರ್ಷದಿಂದ ಸಮಗ್ರ ತನಿಖೆ ಕೈಗೊಳ್ಳಲಾಗಿ, ಆರೋಪಿತರಾದ ಭೀಮರಡ್ಡಿ ಮಕಾಶಿ, ಮಲ್ಲಪ್ಪ ಮಕಾಶಿ, ರಾಯಪ್ಪ ಮಕಾಶಿ ಮತ್ತು ರಾಮಣ್ಣ ಬಿರಾದಾರ ಪೂರ್ವ ಸಂಚು ರೂಪಿಸಿರುವದು  ಬೆಳಕಿಗೆ ಬಂದಿದೆ.

ಸುರಪುರ ಉಪ ವಿಭಾಗ ಡಿವೈಎಸ್ಪಿ ಡಾ.ದೇವರಾಜ ಮಾರ್ಗದರ್ಶನದಲ್ಲಿ ಶಹಾಪುರ ವೃತ್ತ ಠಾಣೆಯ ಸಿಪಿಐ ಚನ್ನಯ್ಯ ಹಿರೇಮಠ ಅವರ ನೇತೃತ್ವದಲ್ಲಿ ಗೋಗಿ ಠಾಣೆ ಪಿಎಸ್‍ಐ ಅಯ್ಯಪ್ಪ ಹಾಗೂ ಪೊಲೀಸ್ ಸಿಬ್ಬಂದಿ ಯಶಸ್ವಿ ತನಿಖೆ ನಡೆಸುವ ಮೂಲಕ ವರ್ಷದಿಂದ ನನೆಗುದಿಗೆ ಬಿದ್ದಿದ್ದ  ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ವೃತ್ತ ಠಾಣೆ ಸಿಪಿಐ ಚನ್ನಯ್ಯ ಹಿರೇಮಠ, ಪಿಐ ಶ್ರೀನಿವಾಸ ಅಲ್ಲಾಪುರೆ, ಗೋಗಿ ಠಾಣೆ ಪಿಎಸ್ಐ ಅಯ್ಯಪ್ಪ, ಭೀ,ಗುಡಿ ಪಿಎಸ್‍ಐ ಸಂತೋಷ ರಾಠೋಡ ಉಪಸ್ಥಿತರಿದ್ದರು.

ಆರೋಪಿಯಲ್ಲಿ ಒಬ್ಬರಾಗಿದ್ದ ಅಶೋಕ ಬಂಗಾರಿ ಈತನನ್ನ ಮಂಪರು ಪರೀಕ್ಷೆಗೆ ಒಳಪಡಿಸಲಾಗಿ, ಕೊಲೆ ಸಂಚು ಬಯಲಾಗಿದ್ದು, ಸಮರ್ಪಕ ವೈಜ್ಞಾನಿಕ ವರದಿ ಆದರಿಸಿ ಇತರೆ ಕೊಲೆ ಆರೋಪಿಗಳಾದ ನಾಲ್ವರನ್ನು ತೀವ್ರ ತನಿಖೆಗೆ ಒಳಪಡಿಸಲಾಗಿ, ಹಲವಾರು ಸಾಕ್ಷಿಆಧಾರಗಳನ್ನು ಕಲೆ ಹಾಕುವ ಮೂಲಕ ಸವಾಲಾಗಿದ್ದ ಪ್ರಕರಣ‌ ಬೇಧಿಸುವಲ್ಲಿ ನಮ್ಮ ತಂಡ ಯಶಸ್ವಿಯಾಗಿರುವದು ಶ್ಲಾಘನೀಯ.

– ಡಾ.ವೇದಮೂರ್ತಿ. ಎಸ್ಪಿ ಯಾದಗಿರಿ.

Related Articles

Leave a Reply

Your email address will not be published. Required fields are marked *

Back to top button