ಗಂಡನಿಗೆ ನಿದ್ದೆ ಮಾತ್ರೆ ನೀಡಿದ ಪತ್ನಿ, ಕುತ್ತಿಗೆ ಹಿಡಿದು ಕೊಲೆಗೆ ಯತ್ನ

ಗಂಡನಿಗೆ ನಿದ್ದೆ ಮಾತ್ರೆ ಹಾಕಿ ಕೊಲೆ ಮಾಡಲು ಯತ್ನಿಸಿದ ಪತ್ನಿ
ಯಾದಗಿರಿಃ ಗಂಡನಿಗೆ ನಿದ್ದೆ ಮಾತ್ರೆ ಹಾಕಿ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಿಸಿದ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಹೂವಿನಹಳ್ಳಿ ಯಲ್ಲಿ ನಡೆದಿದೆ.
ಪಾಪಿ ಪತ್ನಿ ತನ್ನ ಅಕ್ರಮ ಸಂಬಂಧ ಮುಚ್ಚಿ ಹಾಕುವ ಹಿನ್ನೆಲೆ ಗಂಡನನ್ನೆ ಕೊಲೆ ಮಾಡಲು ಯತ್ನಿಸಿದ್ದಾಳೆ ಎನ್ನಲಾಗಿದೆ.
ಚಂದ್ರಕಲಾ ಎಂಬಾಕೆ ತನ್ನ ಸಹೋದರಿಯ ಗಂಡನೊಂದಿಗೆ ಲವ್ವಿಡವ್ವಿ ಇಟ್ಕೊಂಡಿದ್ದಳು. ತಂಗಿಯ ಗಂಡ ವರದಿಯಲ್ಲಿ ಭಾವನಾಗಿದ್ದು, ಅವನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.
ಗಂಡನಿಗೆ ದೇವರ ಪ್ರಸಾದವೆಂದು ತೀರ್ಥದಲ್ಲಿ ನಿದ್ರೆ ಮಾತ್ರೆ ಪುಡಿ ಮಾಡಿ ಹಾಕಿ ಕೊಟ್ಟಿದ್ದಳು. ಕುಡಿದ ಅಮಾಯಕ ಗಂಡ ಗಾಢ ನಿದ್ರೆಗೆ ಜಾರಿದ್ದ. ಆಗ ಭಾವನೊಂದಿಗೆ ಲವ್ವಿಡವ್ವಿ ನಡೆಸುವ ಈಕೆ. ನಿದ್ರೆಗೆ ಜಾರಿದ್ದ ಗಂಡನನ್ನ ಮುಗಿಸಿ ಬಿಟ್ಟರೆ ಅಕ್ರಮ ಸಂಬಂಧಕ್ಕೆ ಅಡ್ಡಿಯೇ ಇರಲಿಲ್ಲ ಎಂದು ಭಾವನ ಜೊತೆ ಗೊಣಗುತ್ತಾ ಗಂಡನ ಕುತ್ತಿಗೆ ಹಿಡಿದು ಸಾಯಿಸಲು ನೋಡಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಆದರೆ ಗಂಡ ಎಚ್ಚರಗೊಂಡ ಆಕೆಯನ್ನು ತಳ್ಳಿ ಆಕೆಯ ಭಾವನಿಗೆ ಥಳಿಸಿ ಅಲ್ಲಿಂದ ಹೊರ ಹೋಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಪೊಲೀಸರ ಸದ್ಯ ಟ್ವಸ್ಟ್ ಸಿಕ್ಕಿದ್ದು, ಆರೋಪಿ ಚಂದ್ರಕಲಾ ಹಾಗೂ ಆಕೆಯ ಭಾವ ಪ್ರಿಯಕರ ಬಸನಗೌಡ ಇಬ್ಬರ ಆಡಿಯೋ ಪೊಲೀಸರಿಗೆ ದೊರೆತಿದ್ದು, ಸದ್ಯ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಕುರಿತು ಕೆಂಭಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೀವ್ರ ತನಿಖೆ ನಂತರವೇ ಸತ್ಯಾಸತ್ಯತೆ ಹೊರ ಬರಲಿದೆ.