ಅಕ್ರಮ ಸಾಗಾಣಿಕೆ 380 ಕ್ವಿಂಟಾಲ್ ಪಡಿತರ ಅಕ್ಕಿ ಜಪ್ತಿ, ಚಾಲಕ ವಶಕ್ಕೆ
ಅಕ್ರಮ ಸಾಗಾಣಿಕೆ 380 ಕ್ವಿಂಟಾಲ್ ಪಡಿತರ ಅಕ್ಕಿ ಜಪ್ತಿ, ಚಾಲಕ ವಶಕ್ಕೆ
8.36ಲಕ್ಷ ಮೌಲ್ಯದ ಪಡಿತರ ಅಕ್ಕಿ ಜಪ್ತಿ, ಚಾಲಕ ವಶಕ್ಕೆ
yadgiri, ಶಹಾಪುರ: ಸಮೀಪದ ಭೀಮರಾಯನಗುಡಿಯಿಂದ ಚಾಮನಾಳ ಕಡೆಗೆ ಅಕ್ರಮವಾಗಿ ಭಾರತ ಬೆಂಚ್ ಟಾವರೆಸ್ ಲಾರಿಯಲ್ಲಿ 760 ಚೀಲಗಳಲ್ಲಿ (380ಕ್ವಿಂಟಾಲ್) 8.36 ಲಕ್ಷ ಮೌಲ್ಯದ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದಾಗ ಶನಿವಾರ ತಾಲೂಕಿನ ಗೋಗಿ ಗ್ರಾಮದ ಅಂಬೇಡ್ಕರ್ ವೃತ್ತ ಬಳಿ ಪೊಲೀಸರು ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ.
ಲಾರಿ ಚಾಲಕ ರಾಜಸ್ಥಾನದ ರಾಮಪ್ರಸಾದ ಬೈರುಲಾಲ್ ಗುಜ್ಜರ ಅವರನ್ನು ಬಂಧಿಸಿದ್ದು, ಗುಜರಾತಿನ ಲಾರಿಯ ಮಾಲೀಕನ ಬಂಧನಕ್ಕೆ ಶೋಧ ನಡೆದಿದೆ.
ಗೋಗಿ ಗ್ರಾಮದ ಅಂಬೇಡ್ಕರ ಚೌಕ್ ಬಳಿ 760 ಪಡಿತರ ಚೀಲಗಳನ್ನು ಹೊತ್ತ ಭಾರತ ಬೆಂಚ್ ಟಾವರೆಸ್ ಲಾರಿ ನಿಂತಿರುವದು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಲಾರಿ ಹಾಗೂ ಚಾಲಕನನ್ನು ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಚಾಲಕನನ್ನು ವಿಚಾರಣೆಗೆ ಒಳಪಡಿಸಲಾಗಿ, ಪಡಿತರ ಅಕ್ಕಿಯನ್ನು ಗುರುಮಿಠಕಲ್ ದಿಂದ ರಾಜಸ್ಥಾನಕ್ಕೆ ಅಕ್ರಮವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗೋಗಿ ಠಾಣೆಯಲ್ಲಿ ದೂರು ದಾಖಲಾಗಿದೆ.
———————