ಮಾನಸಿಕ ಅಸ್ವಸ್ಥನಿಂದ ವೃದ್ಧನ ಕೊಲೆ
ಊಟ ನೀಡದಕ್ಕಾಗಿ ವೃದ್ಧನನ್ನೆ ಕೊಂದ ಮಾನಸಿಕ ಅಸ್ವಸ್ಥ
ಕಲ್ಬುರ್ಗಿಃ ಜಮೀನೊಂದರಲ್ಲಿ ಕೆಲಸ ಮುಗಿಸಿ ಊಟಕ್ಕೆ ಕುಳಿತಿದ್ದ ವೃದ್ಧನೋರ್ವನನ್ನು ಮಾನಸಿಕ ಅಸ್ವಸ್ಥನೊಬ್ಬ ಕಟ್ಟಿಗೆಯಿಂದ ಬಲವಾಗಿ ತಲೆಗೆ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಅಫಜಲಪುರ ತಾಲೂಕಿನ ಗೊಬ್ಬೂರ(ಬಿ) ಗ್ರಾಮದ ಹೊರ ವಲಯದ ಜಮೀನೊಂದರಲ್ಲಿ ನಡೆದಿದೆ.
ಗೊಬ್ಬೂರ(ಬಿ) ಗ್ರಾಮ ನಿವಾಸಿ ವೃದ್ಧ ಸುಲೇಮಾನ (70) ಎಂಬಾತನೇ ಮೃತ ದುರ್ದೈವಿ.
ಈತ ಹುಣಚೆ ಗಿಡಗಳಲ್ಲಿ ಹುಣಸೆಹಣ್ಣು ಬಿಡಿಸುತ್ತಿದ್ದ, ಅದಾಗಲೇ ಹಸಿವಾಗಿದ್ದರಿಂದ ಗಿಡದ ಕೆಳಗೆ ಬುತ್ತಿ ಬಿಚ್ಚಿ ಊಟ ಮಾಡುತ್ತಿದ್ದ, ಅಲ್ಲಿಗೆ ಬಂದ ಸಮೀಪದ ಹೂವಿನಹಳ‌್ಳಿ ಗ್ರಾಮದ ಮಾನಸಿಕ ಅಸ್ವಸ್ಥ ದಿಲೀಪ್ ಸಿಂಗ್ ತನಗೂ ಹಸಿವಾಗಿದೆ ಊಟಕ್ಕೆ ಕೊಡು ಎಂದಿದ್ದಾನೆ.
ಆಗ ಸ್ವಲ್ಪ ತಡಿ ನನ್ನ ಊಟ ಮುಗಿಯಲಿ ಎಲ್ಲವೂ ನಿನಗೆ ನೀಡುವೆ ಎಂದಿದ್ದಾನೆ. ಆಗ ಕೋಪಗೊಂಡ ದಿಲೀಪ್ ಸಿಂಗ್ ವೃದ್ಧನ ಜೊತೆ ಜಗಳವಾಡುತ್ತಲೇ ಅಲ್ಲಿಯೇ ಬಿದ್ದಿದ್ದ ಕಟ್ಟಿಗೆಯಿಂದ ಬಲವಾಗಿ ಪೆಟ್ಟು ನೀಡಿದ ಕಾರಣ ವೃದ್ಧ ಸುಲೇಮಾನ್ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ದೇವಲಗಾಣಗಾಪುರ ಠಾಣಾ ವ್ಯಾಪ್ತಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.