ಪ್ರಮುಖ ಸುದ್ದಿ

ಶಹಾಪುರಃ ಜೇಬುಗಳ್ಳನ ಬಂಧನ, 4 ಮೊಬೈಲ್, 2500 ನಗದು ರೂ.ವಶಕ್ಕೆ

ದೋರನಹಳ್ಳಿಃ ಸಿಎಂ ಕಾರ್ಯಕ್ರಮದಲ್ಲಿ ಜೇಬುಗಳ್ಳ ಬಂಧನ

ದೋರನಹಳ್ಳಿಃ ಸಿಎಂ ಕಾರ್ಯಕ್ರಮದಲ್ಲಿ ಜೇಬುಗಳ್ಳ ಬಂಧನ

ಜೇಬುಗಳ್ಳನ ಬಂಧನ, 4 ಮೊಬೈಲ್, 2500 ನಗದು ರೂ.ವಶಕ್ಕೆ

ಶಹಾಪುರಃ ಮಾ.19 ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ತಾಲೂಕಿನ ದೋರನಹಳ್ಳಿ ಗ್ರಾಮಕ್ಕೆ ಭೇಟಿ ನೀಡಲು ಆಗಮಿಸಿದ್ದ ವೇಳೆ ಹೆಲಿಪ್ಯಾಡನಲ್ಲಿ ಗದ್ದಲದ ನಡುವೆ ಹಲವರ ಮೊಬೈಲ್ ಮತ್ತು ಜೇಭು ಕತ್ತರಿಸಿ ದುಡ್ಡು ಹೊಡೆದ ಜೇಬುಗಳ್ಳನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ಶಹನವಾಜ್ ತಂದೆ ಮಹ್ಮದ್ ಅಲಿ ಸಾ.ಮಿಲ್ಲತ್ ನಗರ ಕಲ್ಬುರ್ಗಿ ಎಂಬಾತನನ್ನು ಬಂಧಿಸಿ ಆತನಿಂದ ವಿವಿಧ ಕಂಪನಿಯ 4 ಮೊಬೈಲ್, ಅಂದಾಜು ಕಿಮ್ಮತ್ತ 31000 ರೂ. ಮತ್ತು 2500 ರೂ ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೆಂಕಟೇಶ ತಂದೆ ಅಂಬಲಪ್ಪ ಸಾ.ಗೋಲಗೇರಿ ತಾ.ಶಹಾಪುರ ಇವರು ತಮ್ಮ ಜೇಬುಕಳ್ಳತನವಾದ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪಿಐ ಶ್ರೀನಿವಾಸ ಅಲ್ಲಾಪುರೆ ಮತ್ತು ಸಿಬ್ಬಂದಿ ಪ್ರಕರಣವನ್ನು ಪತ್ತೆ ಹಚ್ಚಿದ್ದು, ಜೇಬುಗಳ್ಳ ಶಹನವಾಜ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

ಸಿಎಂ ಕಾರ್ಯಕ್ರಮದಲ್ಲಿ ಹಲವರ ಜೇಬಿಗೆ ಕೈ ಹಾಕಿದ್ದ..ಜೇಬುಗಳ್ಳ

ಸಂಸದರೊಬ್ಬರ ಜೇಬಿಗೂ ಕೈ ಹಾಕಿದ್ದ ಖದೀಮ

ಶಹಾಪುರಃ ಈ ಜೇಬುಗಳ್ಳ ಜನಪ್ರತಿನಿಧಿಯಂತೆ ಡ್ರೆಸ್ ಮಾಡಿಕೊಂಡು ಬಂದಿದ್ದ, ನನ್ನ ಜೇಬಿಗೂ ಕೈ ಹಾಕಿದ್ದು, ಮೊಬೈಲ್ ಹೊಡೆದಿದ್ದ, ಅಷ್ಟರಲ್ಲಿ ನಾನು ಹಿಡಿದು ನಾಲ್ಕು ಬಾರಿಸಿದ ತಕ್ಷಣ ತಪ್ಪಾಯಿತೆಂದು ಮೊಬೈಲ್ ವಾಪಸ್ ನೀಡಿದ್ದ ಎಂದು ಬಿಜೆಪಿ ಜಿಲ್ಲಾ ನಾಯಕರೊಬ್ಬರು ಪತ್ರಿಕೆಗೆ ತಿಳಿಸಿದರು.

ಅಲ್ಲದೆ ಸಂಸದರು ಸೇರಿದಂತೆ ಹಲವಾರು ನಾಯಕರ ಜೇಬಿಗೆ ಕತ್ತರಿ ಹಾಕಿದ್ದ ಈ ಕಳ್ಳನನ್ನು ಪತ್ತೆ ಮಾಡಿರುವದು ಸಂತಸ ತಂದಿದೆ ಎಂದ ಅವರು, ಹಲವಾರು ನಾಯಕರ ಜೇಬಿಗೆ ಕೈ ಹಾಕಿದ್ದಾನೆ ಎಂದು ಹೆಸರು ಹೇಳಲು ಇಚ್ಛಿಸದ ಅವರು ಮಾಹಿತಿ ನೀಡಿದರು.

ಸಿಎಂ ಕಾರ್ಯಕ್ರಮವಾಗಿದ್ದರಿಂದ ಯಾರೊಬ್ಬರು ಪ್ರಕರಣ ದಾಖಲಿಸುವ ಧಾವಂತ ಇರಲಿಲ್ಲ. ಆದರೆ ಸಾಕಷ್ಟು ನಾಯಕರು ಪೊಲೀಸರಿಗೆ ಕಾಲ್ ಮಾಡಿ ಮಾಹಿತಿ ನೀಡಿ ಸುಮ್ಮನಾಗಿದ್ದರು. ಆದರೆ ಪೊಲೀಸರು ಓರ್ವರ ದೂರು ಪಡೆದು ಜೇಬುಗಳ್ಳನನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುವದು ಸಂತಸದ ವಿಷಯ ಎಂದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button