ಸಿದ್ದು ಬಾಯಲ್ಲಿ ಉಲ್ಟಾ ಮಚ್ಚೆ ಇದೆ – ಸಿ.ಟಿ ರವಿ
ಸಿದ್ದು ಬಾಯಲ್ಲಿ ಉಲ್ಟಾ ಮಚ್ಚೆ ಇದೆ – ಸಿ.ಟಿ ರವಿ
ಚಿಕ್ಕಮಗಳೂರಃ ಮಾಜಿ ಸಿಎಂ ಸಿದ್ರಾಮಯ್ಯ ಬಾಯಲ್ಲಿ ಉಲ್ಟಾ ಮಚ್ಚೆ ಇದೆ. ಆ ಕಾರಣಕ್ಕೆ ಅವರೇನು ಹೇಳುತ್ತಾರೋ ಅದೆಲ್ಲವೂ ಉಲ್ಟಾ ಆಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ನಗರದಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರು ಪ್ರಧಾನಿಯಾಗಲ್ಲ ಅಪ್ಪನಾಣೆ ಎಂದಿದ್ದರೂ ಆದರೆ ಏನಾಯಿತು ಮೋದಿಯಬರು ಪ್ರಧಾನಿಯಾದರೂ. ಅದೇ ರೀತಿ ಕಳೆದ ಚುನಾವಣೆ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದರು ಅದು ಹುಸಿಯಾಯಿತು.
ಹೀಗಾಗಿ ಅವರೇನು ಹೇಳ್ತಾರೆ ಅದು ಉಲ್ಟಾ ಆಗುತ್ತದೆ. ಅಲ್ಲದೆ ಪ್ರಧಾನಿ ಮೋದಿಜೀಯವರನ್ನ ನರಹಂತಕ ಎಂದೂ ಜರಿದ ಸಿದ್ರಾಮಯ್ಯ ನಿಂದ ನಾನು ಸಂಸ್ಕ್ರತಿಯ ಪಾಠ ಕಲಿಬೇಕಿಲ್ಲ.
ಹಿಂದೆ ಪ್ರಜಾಪ್ರಭುತ್ವದ ಕತ್ತು ಹಿಸುಕಿ ತುರ್ತು ಪರಿಸ್ಥಿತಿ ಹೇರಿದ್ದರೋ ಅವರ ಅನುಯಾಯಿಗಳ ಬಾಯಲ್ಲಿ ಪ್ರಜಾಪ್ರಭುತ್ವದ ವ್ಯಾಖ್ಯಾನ ಬರುತ್ತಿದೆ ಎಂದರೆ ಇವರೆಂಥವರು ತಿಳಿಯುತ್ತದೆ.
ಅಲ್ಲದೆ ಡಾ.ಅಂಬೇಡ್ಕರಂತವರನ್ನೆ ಎರಡೆರಡು ಬಾರಿ ಸೋಲಿಸಿದ ಇವರಿಂದ ಈಗ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಛೇಡಿಸಿದರು.