ಬಜೆಟ್‍ಃ ಹೈಕ ಭಾಗಕ್ಕಿಲ್ಲ ಪ್ರಾಧಾನ್ಯತೆ ದರ್ಶನಾಪುರ ಬೇಸರ
ಎಲ್ಲದಕ್ಕೂ ಕಕ ಮಂಡಳಿ ಹಣ ಬಳಸಲು ಹೇಳಿದ ಸರ್ಕಾರ-ದರ್ಶನಾಪುರ ಆಕ್ಷೇಪ
ಎಲ್ಲದಕ್ಕೂ ಕಕ ಮಂಡಳಿ ಹಣ ಬಳಸಲು ಹೇಳಿದ ಸರ್ಕಾರ-ದರ್ಶನಾಪುರ ಆಕ್ಷೇಪ
ಮುಗಿದ ಯೋಜನೆಯ ಹೆಸರು ಬಜೆಟ್‍ನಲ್ಲಿ ಬಳಕೆ – ದರ್ಶನಾಪುರ ವ್ಯಂಗ್ಯ
YADGIRI,ಶಹಾಪುರಃ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ನೀಡಿದ ಅನುದಾನವನ್ನೆ ಎಲ್ಲದಕ್ಕೂ ಬಳಸುವಂತೆ ಸೂಚಿಸುವ ಅಧಿಕಾರ ಸರ್ಕಾರಕ್ಕಿಲ್ಲ. ರಾಯಚೂರ ವಿಮಾನ ನಿಲ್ದಾಣ, ಯಾದಗಿರಿ ರಿಂಗ್ ರಸ್ತೆ ಸೇರಿದಂತೆ ಎಲ್ಲದಕ್ಕೂ ಕಕ ಪ್ರದೇಶಾಭಿವೃದ್ಧಿ ಅನುದಾನವೇ ಬಳಸುವಂತೆ ಬಜೆಟ್ ನಲ್ಲಿ ಪ್ರಸ್ತಾಪಿಸಿದ ಸರ್ಕಾರದ ನಡೆ ಸರಿಯಲ್ಲ ಎಂದು ಮಾಜಿ ಮಂತ್ರಿ ಹಾಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಬಜೆಟ್ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.
VV ಯೊಂದಿಗೆ ಮಾತನಾಡಿದ ಅವರು, ಕಕ ಮಂಡಳಿಗೆ ಸರ್ಕಾರ ಹಣ ನೀಡುವದು 371 (ಜೆ) ಅನುದಾನದಡಿ ಈ ಪ್ರದೇಶವನ್ನು ಹೆಚ್ಚಿನ ರೀತಿ ಅಭಿವೃದ್ಧಿ ಪಡಿಸಲು ಆದರೆ ಅದೆ ಹಣವನ್ನು ಸರ್ಕಾರ ಎಲ್ಲಾ ಯೋಜನೆಗಳಿಗೆ ಬಳಸಲು ಸೂಚಿಸಿದರೆ, ಮಂಡಳಿ ಇರುವದಾದರೂ ಏತಕ್ಕೆ ಎಂದು ಪ್ರಶ್ನಿಸಿದರು. ಅಲ್ಲದೆ ನಮ್ಮ ಕ್ಷೇತ್ರದ ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆ ಈಗಾಗಲೇ ಕೆಲಸ ಆರಂಭಗೊಂಡಿದೆ. ಅದನ್ನು ಸಹ ಬಜೆಟ್ ನಲ್ಲಿ ಸೇರ್ಪಡೆ ಮಾಡಿದ್ದಾರೆ.
ಇಂತಹ ಸಾಕಷ್ಟು ಮುಗಿದ ಯೋಜನೆಗಳು ಸಹ ಬಜೆಟ್ ನಲ್ಲಿ ಸೇರಿಸಿರುವದು ಹಾಸ್ಯಾಸ್ಪದವಾಗಿದೆ. ಅಲ್ಲದೆ ಸಣ್ಣ ಪುಟ್ಟ ವ್ಯಾಪಾರಿಗಳು, ಸಣ್ಣ ಅತಿ ಸಣ್ಣ ರೈತರು ಸೇರಿದಂತೆ ಇತರೆ ಶ್ರಮಿಕ ವರ್ಗದ ಜನರಿಗೆ ಯಾವುದೇ ಪೂರಕ ಯೋಜನೆಗಳು ರೂಪಿಸಿಲ್ಲ.
ಹಳೇ ಕೆಲಸಗಳನ್ನೆ ಹೊಸ ಪುಸ್ತಕದಲ್ಲಿ ಪ್ರಕಟಿಸಿ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ವ್ಯಂಗ್ಯ ವ್ಯಕ್ತಪಡಿಸಿದರು. ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೇವಲ 5 ಸಾವಿರ ಕೋಟಿ ನೀಡಿದ್ದು, ಸಂಬಂಧಿಸಿದ ಅಧಿಕಾರಿಗಳು ರೂಪಿಸಿದ ಯೋಜನೆ ಪ್ರಕಾರ ಕೃಷ್ಣಾ ಮೇಲ್ದಂಡೆ ಯೋಜನೆಗೆ 30 ಸಾವಿರ ಕೋಟಿ ಅನುದಾನ ಪ್ರಸ್ತಾವನೆ ಮಾಡಲಾಗಿತ್ತು ಆದರೆ ಸರ್ಕಾರ ನೀಡಿರುವದು ಕೇವಲ 5 ಸಾವಿರ ಕೋಟಿ ಇದರಿಂದ ಏನು ಆಗದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.