ಪ್ರಮುಖ ಸುದ್ದಿ

ದರ್ಶನಾಪುರ ಮೌಲ್ಯಯುತ ರಾಜಕಾರಣಿ-ಕಾಳಹಸ್ತೇಂದ್ರ ಶ್ರೀ

ಶಹಾಪುರಃ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ನಾಡು ಕಂಡ ಸರಳ ಸಜ್ಜನಿಕೆಯ ಮೌಲ್ಯಯುತ ರಾಜಕಾರಣಿಯಾಗಿದ್ದಾರೆ ಎಂದು ಏಕದಂಡಗಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಚರಬಸವೇಶ್ವರ ಮೆಟ್ರಿಕ್ ಪೂರ್ವ ಶಾಲೆಯಲ್ಲಿ ಶಾಸಕ ದರ್ಶನಾಪುರ ಅವರ ಜನ್ಮ ದಿನಾಚರಣೆ ಅಂಗವಾಗಿ ಚರಬಸವೇಶ್ವರ ವಿದ್ಯಾವರ್ಧಕ ಸಂಸ್ಥೆ ಹಾಗೂ ದರ್ಶನಾಪುರ ಅಭಿಮಾನಿ ಬಳಗ ಆಯೋಜಿಸಿದ್ದ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ಮಾತಿಗಿಂತ ಕೃತಿ ಮೇಲೂ ಎಂಬ ಭಾವನೆಯಿಂದ ನಾಡಿನ ಶೈಕ್ಷಣಿಕ, ಆರ್ಥಿಕ ಹಾಗೂ ಕೃಷಿ, ನೀರಾವರಿ, ಸಾಂಸ್ಕøತಿಕ ಅಭಿವೃದ್ಧಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ವಿನಯಶೀಲ ರಾಜಕಾರಣಿಯಾಗಿದ್ದಾರೆ. ಸದಾ ಸಾಮಾಜಿಕ, ಅಭಿವೃದ್ಧಿಯ ಚಿಂತನಾಶೀಲರಾಗಿದ್ದು, ಕ್ಷೇತ್ರದ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು.

ಪ್ರಾಸ್ತವಿಕವಾಗಿ ಮಾತನಾಡಿದ ಪ್ರಾಚಾರ್ಯ ಪ್ರೋ.ಶಿವಲಿಂಗಣ್ಣ ಸಾಹು, ದರ್ಶನಾಪುರ ಅವರು ಎಲ್ಲಾ ಸಮುದಾಯಗಳ ಪ್ರೀತಿಯ ಸಮನ್ವಯ ಜನನಾಯಕರಾಗಿದ್ದಾರೆ. ಅವರ ಮುಂದಿನ ರಾಜಕೀಯ ನಡೆಯಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಸಿ ವಿತರಣೆ ಮಾಡಲಾಯಿತು. ಅಲ್ಲದೆ ದರ್ಶನಾಪುರ ಅವರ ಭಾವಚಿತ್ರವಿರುವ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.

ಪಪ್ಪುಗೌಡ ದರ್ಶನಾಪುರ ಕಾರ್ಯಕ್ರಮ ಉದ್ಘಾಟಿಸಿದರು. ಬಸವಯ್ಯ ಶರಣರು, ಗುಂಬಳಾಪುರ ಮಠದ ಸಿದ್ಧೇಶ್ವರ ಶಿವಾಚಾರ್ಯರು, ಸಯ್ಯದ್ ಹಜರತ್ ಸಾಹೇಬ, ಕೆಂಬಾವಿಯ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯವಹಿಸಿದ್ದರು. ಮಸ್ತಫಾ ದರ್ಬಾನ್, ದರ್ಶನಾಪುರ ಆಪ್ತ ಸಹಾಯಕ ಶರಣು ಇಟಗಿ ಸೇರಿದಂತೆ ಮುಖಂಡರಾದ ಗುರು ಮಣಿಕಂಠ, ಸದಾಶಿವ ಮುಧೋಳ, ಚಿನ್ನುಗೌಡ ಪಾಟೀಲ್, ಕಾಂಗ್ರೆಸ್ ಯೂತ್ ಅಧ್ಯಕ್ಷ ಮೌನೇಶ ನಾಟೇಕಾರ, ಲಕ್ಷ್ಮಣ ದೇವಿನಗರ, ಶಾಂತು ಪಾಟೀಲ್, ರಾಮು ತಹಸೀಲ್, ಅಜೀಮ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button