ಡಿಸಿಸಿ ಬ್ಯಾಂಕ್ ನಾಮನಿರ್ದೇಶಿತ ಸದಸ್ಯರಾಗಿ ಶಿರವಾಳ ನೇಮಕ
ಇಬ್ರಾಹಿಂಸಾಬ ಶಿರವಾಳ ಡಿಸಿಸಿ ಬ್ಯಾಂಕ್ ಸದಸ್ಯರಾಗಿ ನೇಮಕ
ಡಿಸಿಸಿ ಬ್ಯಾಂಕ್ ನಾಮನಿರ್ದೇಶಿತ ಸದಸ್ಯರಾಗಿ ಶಿರವಾಳ ನೇಮಕ
ಇಬ್ರಾಹಿಂಸಾಬ ಶಿರವಾಳ ಡಿಸಿಸಿ ಬ್ಯಾಂಕ್ ಸದಸ್ಯರಾಗಿ ನೇಮಕ
yadgiri, ಶಹಾಪುರಃ ಕಲ್ಬುರ್ಗಿ ಹಾಗೂ ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ಆಡಳಿತ ಮಂಡಳಿ ನಾಮ ನಿರ್ದೇಶಿತ ಸದಸ್ಯರಾಗಿ ನಗರ ಕಾಂಗ್ರೆಸ್ ಮುಖಂಡ ಇಬ್ರಾಹಿಂಸಾಬ ಶಿರವಾಳ ಅವರನ್ನು ನೇಮಿಸಿ ಸಹಕಾರ ಇಲಾಖೆಯ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ಎ.ಸಿ.ದಿವಾಕರ್ ಅವರು ರಾಜ್ಯಪಾಲರ ಆದೇಶನುಸಾರ ಆದೇಶ ಹೊರಡಿಸಿದ್ದಾರೆ.
ಇಬ್ರಾಹಿಂಸಾಬ ಶಿರವಾಳ ತಾಲೂಕಿನ ಅಲ್ಪಸಂಖ್ಯಾತ ಸಮುದಾಯ ಮುಖಂಡರಾಗಿದ್ದು, ಕಾಂಗ್ರೆಸ್ ಪ್ರಮುಖ ಕಾರ್ಯಕರ್ತರಾಗಿ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಹರ್ಷಃ ಮುಖಂಡ ಇಬ್ರಾಹಿಂಸಾಬ ಶಿರವಾಳ ಅವರನ್ನು ಡಿಸಿಸಿ ಬ್ಯಾಂಕ್ ನಾಮನಿರ್ದೇಶಿತ ಸದಸ್ಯರಾಗಿ ನೇಮಿಸಿರುವ ಕಾರಣ ಅವರ ಬೆಂಬಲಿಗರು, ಅಭಿಮಾನಿಗಳು ಸಮುದಾಯ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದೇ ವೇಳೆ ನೂತನ ಸದಸ್ಯ ಶಿರವಾಳ ಸ್ಥಳೀಯ ಶಾಸಕ, ಅವರ ನಾಯಕರೂ ಆದ ಸಚಿವ ದರ್ಶನಾಪುರ ಸೇರಿದಂತೆ ಸುರಪುರ ಮತ್ತು ಯಾದಿಗಿರಿ ಶಾಸಕರು ಸೇರಿದಂತೆ ತಮ್ಮನ್ನು ಗುರುತಿಸಿ ಡಿಸಿಸಿ ಬ್ಯಾಂಕ್‍ಗೆ ನಾಮ ನಿರ್ದೇಶಿತ ಸದಸ್ಯರಾಗಿ ನೇಮಿಸಲು ಕಾರಣೀಭೂತರಾದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.