ಪ್ರಮುಖ ಸುದ್ದಿ
ಮುಖಂಡ ಲಿಂಗಣ್ಣ ಕೊಂಡಾಪುರ ನಿಧನ
ಮುಖಂಡ ಲಿಂಗಣ್ಣ ಕೊಂಡಾಪುರ ನಿಧನ
ಯಾದಗಿರಿಃ ಜೆಡಿಎಸ್ ಮುಖಂಡ ನಿಂಗಣ್ಣ ಕೊಂಡಾಪುರ ಇಂದು ಹೃದಯಾಘಾತದಿಂದ ನಿಧನರಾದರು.
ಅವರು ಜಿಲ್ಲೆಯ ಶಹಾಪುರ ತಾಲೂಕಿನ ಹಯ್ಯಾಳ(ಬಿ) ಗ್ರಾಮ ನಿವಾಸಿಯಾಗಿದ್ದು, ಸಾಮಾಜಿಕ ಕಾರ್ಯ ಚಟುವಟಿಕೆಯಲ್ಲಿ ಅವರು ಗುರುತಿಸಿಕೊಂಡಿದ್ದರು.
ಕೆಲ ದಿನಗಳ ಹಿಂದೆ ಕೊರೊನಾ ಆವರಿಸಿದ ಕಾರಣ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಆದರೆ ಉಸಿರಾಟ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ದಿಡೀರನೆ ಹೃದಯಾಘಾತದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮೃತರ ಅಂತ್ಯಕ್ರಿಯೆ ಇಂದೇ ಸಂಜೆ 4 ಗಂಟೆಗೆ ಸ್ವಗ್ರಾಮ ಹಯ್ಯಾಳ(ಬಿ) ದಲ್ಲಿ ನಡೆಯಲಿದೆ ಮೂಲಗಳು ತಿಳಿಸಿವೆ.