ಪ್ರಮುಖ ಸುದ್ದಿಸಂಸ್ಕೃತಿ
2024 ರ ದೀಪಾವಳಿ ಯಾವಾಗ.? ಇಲ್ಲಿದೆ ಮಾಹಿತಿ
ಗೋವರ್ಧನ ಪೂಜೆ ಎಂದಿದೆ ಗೊತ್ತಾ.? ಪಂಚಾಂಗ ವಿವರ ಇಲ್ಲಿದೆ.!
ದೀಪಾವಳಿ ಯಾವಾಗ..?
ಹಿಂದೂ ಪಂಚಾಂಗದ ಪ್ರಕಾರ ಕಾರ್ತಿಕ ಮಾಸದ ಅಮಾವಾಸ್ಯೆ ತಿಥಿ ಅಕ್ಟೋಬರ್ 31 ರಂದು ಮಧ್ಯಾಹ್ನ 3:52 ಕ್ಕೆ ಪ್ರಾರಂಭವಾಗಿ ನವೆಂಬರ್ 1 ರಂದು ಸಂಜೆ 6:18 ಕ್ಕೆ ಕೊನೆಗೊಳ್ಳುತ್ತದೆ.
ಶ್ರೀಲಕ್ಷ್ಮೀ ದೇವಿಯ ಪೂಜಾ ಶುಭ ಸಮಯವು ನವೆಂಬರ್ 1 ರಂದು ಸಂಜೆ 5:36 ರಿಂದ 6:16 ರವರೆಗೆ ಇರುತ್ತದೆ.
ದೀಪಾವಳಿಯನ್ನು ನವೆಂಬರ್ 1, 2024 ರಂದು ಮಾತ್ರ ಆಚರಿಸಲಾಗುತ್ತದೆ. ನರಕ ಚತುರ್ದಶಿ ಅಕ್ಟೋಬರ್ 31 ರಂದು, ದೀಪಾವಳಿ ಅಂದರೆ ಶ್ರೀ ಲಕ್ಷ್ಮಿ ಪೂಜೆ ನವೆಂಬರ್ 1 ರಂದು, ನವೆಂಬರ್ 2 ರಂದು ಗೋವರ್ಧನ ಪೂಜೆ ಆಚರಿಸಲಾಗುತ್ತದೆ.
ಆಯಾ ಸಮುದಾಯ, ಕುಟುಂಬದ ಪಾರಂಪರೆ ಸಂಪ್ರದಾಯದಂತೆ ದೀಪಾವಳಿ ಹಬ್ಬ ಆಚರಿಸಿಕೊಳ್ಳುತ್ತಾ ಬರಲಾಗುತ್ತಿದೆ.
ಆಯಾ ರಾಜ್ಯ, ಪ್ರದೇಶಗಳಿಗೆ ಇದು ಭಿನ್ನ ವಿಭಿನ್ನತೆಯನ್ನು ಹೊಂದಿದೆ. ಆಯಾ ಸಾಂಸ್ಕೃತಿಕ ಪಾರಂಪರೆಯಂತೆ ಆಚರಣೆಗಳು ನಡೆಯಲಿವೆ.