ದೀಪಾವಳಿಃ ಪಟಾಕಿ ಖರೀದಿಗಾಗಿ ಅಲ್ಲಮಪ್ರಭು ಅಂಗಡಿಗೆ ಮುಗಿಬಿದ್ದ ಜನತೆ
ದೀಪಾವಳಿ ಸಂಭ್ರಮದಲ್ಲಿ ಮಿಂದ ಜನತೆ

ದೀಪಾವಳಿಃ ಪಟಾಕಿ ಖರೀದಿಗಾಗಿ ಅಲ್ಲಮಪ್ರಭು ಅಂಗಡಿಗೆ ಮುಗಿಬಿದ್ದ ಜನತೆ
ದೀಪಾವಳಿ ಸಂಭ್ರಮದಲ್ಲಿ ಮಿಂದ ಜನತೆ
ಯಾದಗಿರಿ, ಶಹಾಪುರಃ ಕಳೆದ ಎರಡು ವರ್ಷದಿಂದ ಕೋವಿಡ್ ಹಿನ್ನೆಲೆ ಹಬ್ಬಗಳ ಸಂಭ್ರಮ ಕಮರಿ ಹೋಗಿತ್ತು. ಈ ವರ್ಷ ಕೋವಿಡ್ ಹಾವಳಿ ಇಲ್ಲದಿರುವ ಕಾರಣ, ಆತಂಕದಿಂದ ಹೊರ ಬಂದು ಸಾಂಪ್ರದಾಯಿಕ ಹಬ್ಬಗಳಲ್ಲಿ ಖುಷಿಯಲ್ಲಿ ಮಿಂದೇಳುತ್ತಿದ್ದಾರೆ.
ದಸರಾ ಮುಗೀಯುತ್ತಿದ್ದಂತೆ ಇದೀಗ ದೀಪಾವಳಿ ಸಂಭ್ರಮದಲ್ಲಿ ಜನರು ತಲ್ಲೀನರಾಗಿದ್ದಾರೆ.
ಕೋವಿಡ್ ಕಾಲದ ಸಾವು-ನೋವು ಕಷ್ಟ ಕಾರ್ಪಣ್ಯ ಮರೆತು ಬದುಕಿನ ಮುಂದಿನ ಪಯಣ ಆಸ್ವಾಧಿಸುವತ್ತ ಹೆಜ್ಜೆ ಹಾಕುತ್ತಿರುವದು ಉತ್ತಮವೇ ಸರಿ.
ದೀಪಾವಳಿ ಹಿನ್ನೆಲೆ ನಗರದ ಅಲ್ಲಮ ಪ್ರಭು ಜನರಲ್ ಸ್ಟೋರ್ ನಲ್ಲಿ ಪಟಾಕಿ ಖರೀದಿಗಾಗಿ ಜನವೋ ಜನ ಸೇರಿರುವದೇ ಇದಕ್ಕೆ ಸಾಕ್ಷಿ ಎನ್ನಬಹುದು.
ಎನೇ ದೀಪಗಳ ಹಾವಳಿ ಮಧ್ಯ ಅಂಧಕಾರ ಎಲ್ಲವೂ ಅಳಸಿ ಬೆಳಕು ಮೂಡಿ ಹೊಸ ಬದುಕಿಗೆ ಹೊನಲಿನ ಮಾರ್ಗ ದೊರೆಯಲಿ.ಆದರೆ ಇದೇ ಸಂಭ್ರಮದಲ್ಲಿ ಯಾವುದೇ ಅವಘಡ ನಡೆಯದಂತೆ ಜನರು ಎಚ್ಚರಿಕೆಯಿಂದ ಪರಿಸರ ಉಪಯುಕ್ತ ಪಟಾಕಿಗಳನ್ನು ಸರ್ಕಾರ ನಿಯಮಗಳನ್ನು ಅನುಸರಿಸಿ ಮಾರಾಟಕ್ಕೆ ಲಭ್ಯವಿರುವ ಪಟಾಕಿಗಳನ್ನೇ (ಹಸಿರು ಪಟಾಕಿ) ಹೊಡೆದು ಸಂಭ್ರಮಿಸಲಿ ಎಂಬುದೇ ಈ ವರದಿ ಆಶಯ.
ಮತ್ತೊಮ್ಮೆ ಮಕ್ಕಳು ಪಟಾಕಿ ಹಚ್ಚುವಾಗ ಪಾಲಕರು ಜೊತೆಗಿದ್ದು, ಸಲಹೆ ಸೂಚನೆ ಮೇರೆಗೆ ಪಟಾಕಿ ಸಿಡಿಸಿ ಸಂಭ್ರಮಿಸಿ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.
-ವಿವಿ ಬಳಗ