ಪ್ರಮುಖ ಸುದ್ದಿ

ಕರೇಶ್ವರಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದಿಂದ 3 ಲಕ್ಷ

ಬೂದನೂರ ಕರೇಶ್ವರಿ ದೇವಸ್ಥಾನಃ 3 ಲಕ್ಷ ರೂ.ಡಿಡಿ ವಿತರಣೆ

ಬೂದನೂರ ಕರೇಶ್ವರಿ ದೇವಸ್ಥಾನಃ 3 ಲಕ್ಷ ರೂ.ಡಿಡಿ ವಿತರಣೆ

ಕರೇಶ್ವರಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದಿಂದ 3 ಲಕ್ಷ

yadgiri, ಶಹಾಪುರಃ ಸುಕ್ಷೇತ್ರ ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಕಲ್ಯಾಣ ಕರ್ನಾಟಕ ಭಾಗದ ಹಲವಾರು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಕೈಜೋಡಿಸಿದ್ದು, ದೇವಸ್ಥಾನಗಳ ಪುನರುಜ್ಜೀವನ ಮೂಲಕ ಆಯಾ ಪ್ರದೇಶಗಳು, ವಾಸಿಸುವ ಜನರು ಶ್ರೀದೇವರ ಆಶೀರ್ವಾದದಿಂದ ಸಮೃದ್ಧತೆ ಹೊಂದಲಿ ಎಂಬ ಆಶಯವನ್ನು ಹೊಂದಿದ್ದಾರೆ ಎಂದು ಸಂಸ್ಥೆಯ ಜಿಲ್ಲಾ ನಿರ್ದೇಶಕ ಕಮಲಾಕ್ಷ ತಿಳಿಸಿದರು.

ತಾಲೂಕಿನ ಬೂದನೂರ ಗ್ರಾಮದ ಕರೇಶ್ವರಿ ಅಮ್ಮನವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ದೇವಾಸ್ಥಾನದ ಸಮಿತಿಗೆ 3 ಲಕ್ಷ ರೂ. ಡಿಡಿ ವಿತರಿಸಿ ಮಾತನಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳದಿಂದ ಅನುಷ್ಠಾನ ಮಾಡುತ್ತಿರುವ ಕಾರ್ಯಕ್ರಮಗಳ ಬಗ್ಗೆ ಮತ್ತು ಸ್ವ-ಸಹಾಯ ಪ್ರಗತಿ ಬಂಧು ಸಂಘಗಳ ಮುಖಾಂತರ ಗ್ರಾಮೀಣ ಭಾಗದಲ್ಲಿ ಸದಸ್ಯರ ಮನೆ ಬಾಗಿಲಿಗೆ ಯೋಜನೆಗಳ ಸೌಲಭ್ಯವನ್ನು ಒದಗಿಸುವ ಮೂಲಕ ಕುಟುಂಬದ ಸಬಲೀಕರಣ ಮತ್ತು ಸಮಗ್ರ ಅಭಿವೃದ್ಧಿಗೆ ಸಹಕರಿಸುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕರೇಶ್ವರಿದೇವಿ ಚಾರಿಟೇಬಲ್ ಟ್ರಸ್ಟ್‍ನ ಬಂಡೆಪ್ಪ ಮುತ್ಯಾ, ಲಚಮಯ್ಯ ಮುತ್ಯಾ, ಮತ್ತು ಸಮಿತಿ ಅದ್ಯಕ್ಷ ಶಿವಲಿಂಗರಡ್ಡಿ ಸಾಹು ಹಂಗರಗಿ, ಮಲ್ಲಾರಡ್ಡಿ ಹುಡೇದ, ಧರ್ಮರಡ್ಡಿ ಹೊಸಮನಿ, ದೇವಿಂದ್ರಪ್ಪ ಪೂಜಾರಿ, ರಾಜೂ ಪಟೇಲ್, ಭೀಮಣ್ಣ ಮಾಸ್ತರ್, ಅನಂತರಡ್ಡಿ ಸಾಹು, ಮಹಿಪಾಲರಡ್ಡಿ ಹೊಸಮನಿ, ಸಿದ್ರಾಮಪ್ಪ ಕಾಡಂಗೇರಾ, ಮಲ್ಲಿಕಾರ್ಜುನ ಅಂಗಡಿ, ಯೋಜನಾಧಿಕಾರಿ ಕಲ್ಲಪ್ಪ ಯಾವಗಲ್, ವಲಯ ಮೇಲ್ವಿಚಾರಕಿ ಅನ್ನಪೂರ್ಣ ಮತ್ತು ಸೇವಾ ಪ್ರತಿನಿಧಿ ಮಲ್ಲಿಕಾರ್ಜುನ ಇತರರಿದ್ದರು.

————————-

Related Articles

Leave a Reply

Your email address will not be published. Required fields are marked *

Back to top button